ಉದ್ಯೋಗ ಆಮಿಷವೊಡ್ಡಿ ಮಹಿಳೆ ಮೇಲೆ ಗ್ಯಾಂಗ್‍ರೇಪ್

ಈ ಸುದ್ದಿಯನ್ನು ಶೇರ್ ಮಾಡಿ

Gang-Rape
ಹೈದರಾಬಾದ್, ಆ.10-ಉದ್ಯೋಗ ದೊರಕಿಸಿಕೊಡುವ ಆಮಿಷವೊಡ್ಡಿ 26 ವರ್ಷ ಮಹಿಳೆಯೊಬ್ಬರ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂದ ಹೈದರಾಬಾದ್‍ನ ಆರ್.ಎಸ್.ನಗರದ ಸಂತಸ್ತ್ರ ಮಹಿಳೆ ಪೆÇಲೀಸರಿಗೆ ದೂರು ನೀಡಿದ್ದಾರೆ. ಈ ಕೃತ್ಯ ಕೆಲವು ದಿನಗಳ ಹಿಂದೆ ನಡೆದಿದ್ದರೂ, ದುಷ್ಕರ್ಮಿಗಳ ಬೆದರಿಕೆಯಿಂದಾಗಿ ಅವರು ಪೊಲೀಸರಿಗೆ ದೂರು ನೀಡಿರಲಿಲ್ಲ.

ಆನ್‍ಲೈನ್ ತಮ್ಮ ಚಿತ್ರಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಡಿಸಿಪಿ(ಪಶ್ಚಿಮ ವಲಯ) ಎ.ಆರ್.ಶ್ರೀನಿವಾಸ ತಿಳಿಸಿದ್ದಾರೆ. ನನಗೆ ಪರಿಚಯವಿದ್ದ ರಾಜ್ ಕಿರಣ್ ಎಂಬಾತ ಉದ್ಯೋಗದ ಆಮಿಷವೊಡ್ಡಿ ನನ್ನನ್ನು ಗುಂಟೂರಿನ ಮನೆಯೊಂದಕ್ಕೆ ಕರೆದೊಯ್ದು, ತಂಪು ಪಾನೀಯ ನೀಡಿದ. ಅದರಲ್ಲಿ ಮತ್ತು ಬರಿಸುವ ವಸ್ತು ಇದೆ ಎಂಬುದನ್ನು ತಿಳಿಯದೇ ನಾನು ಅದನ್ನು ಕುಡಿದು ನಂತರ ಪ್ರಜ್ಞಾಶೂನ್ಯಳಾದೆ. ಬಳಿಕ ಎಚ್ಚರವಾದಾಗ ನಾಲ್ವರು ಕಾಮುಕರು ನನ್ನ ಮೇಲೆ ಅತ್ಯಾಚಾರ ಎಸಗಿರುವುದು ತಿಳಿಯಿತು ಎಂದು ಸಂತ್ರಸ್ತ ಮಹಿಳೆಯ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin