ಮಹಾರಾಷ್ಟ್ರದ ಮನೆಯೊಂದರಲ್ಲಿ ಭಾರಿ ಪ್ರಮಾಣದ ಸ್ಪೋಟಕಗಳು ವಶ

ಈ ಸುದ್ದಿಯನ್ನು ಶೇರ್ ಮಾಡಿ

Exposive--01

ಮುಂಬೈ, ಆ.10-ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್) ಅಧಿಕಾರಿಗಳ ತಂಡ ಮುಂಬೈ ಬಳಿ ಪಾಲ್‍ಗಢ್ ಜಿಲ್ಲೆಯ ನಲಾ ಸೊಪಾರ ಬಡಾವಣೆಯ ಮನೆ ಮತ್ತು ಮಳಿಗೆ ಮೇಲೆ ಇಂದು ನಸುಕಿನಲ್ಲಿ ದಾಳಿ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಬ್ಬನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಖಚಿತ ಸುಳಿವಿನ ಮೇರೆಗೆ ನಲಾ ಸೊಪಾರ ಬಡಾವಣೆಯ ವೈಭವ್ ರಾವತ್ ಎಂಬಾತನ ಮನೆ ಮೇಲೆ ಎಟಿಎಸ್ ತಂಡವು ದಾಳಿ ನಡೆಸಿತು. ಅಲ್ಲಿ ಕೆಲವು ಸ್ಫೋಟಕಗಳು ಪತ್ತೆಯಾದವು. ಆತನನ್ನು ಬಂಧಿಸಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇದಾದ ಬಳಿಕ ಇದೇ ಬಡಾವಣೆಯ ಇನ್ನೊಂದು ಅಂಗಡಿಯ ಮೇಲೆ ದಾಳಿ ನಡೆಸಿದ ಸಿಬ್ಬಂದಿ ಅಲ್ಲೂ ಸಹ ಕೆಲವು ಸ್ಫೋಟಕಗಳನ್ನು ಜಪ್ತಿ ಮಾಡಿದ್ದಾರೆ.

ಈ ಸ್ಪೋಟಕಗಳು ಆರ್‍ಡಿಎಕ್ಸ್ ಇರಬಹುದೇ ಎಂಬ ಬಗ್ಗೆ ದೃಢಪಡಿಸಿಕೊಳ್ಳಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin