ಗಣರಾಜೋತ್ಸವದ ವಿಶೇಷ ಅತಿಥಿಯಾಗಿ ಭಾರತಕ್ಕೆ ಟ್ರಂಪ್ ಬರೋದು ಡೌಟ್..?!

ಈ ಸುದ್ದಿಯನ್ನು ಶೇರ್ ಮಾಡಿ

Trump--02
ನವದೆಹಲಿ/ವಾಷಿಂಗ್ಟನ್, ಆ.10-ಮುಂದಿನ ಗಣ ರಾಜೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ನೀಡಲಿರುವ ಅಧಿಕೃತ ಆಹ್ವಾನ ಪರಿಶೀಲನೆಯಲ್ಲಿದೆ ಎಂದು ದೆಹಲಿ ಮತ್ತು ವಾಷಿಂಗ್ಟನ್ ತಿಳಿಸಿದೆ. ಈ ಸಂಬಂಧ ಭಾರತ ಮತ್ತು ಅಮೆರಿಕ ಸರ್ಕಾರಗಳು ಸಂಪರ್ಕದಲ್ಲಿದ್ದು, ಟ್ರಂಪ್ ಭೇಟಿಯ ದಿನಾಂಕ, ಸಮಯ ಹಾಗೂ ಮತ್ತಿತರ ವಿವರಗಳು ಇನ್ನೂ ನಿಗದಿಯಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುಂದಿನ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಸಮಾರಂಭಕ್ಕೆ ಅಮೆರಿಕ ಅಧ್ಯಕ್ಷರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಯಾವುದೇ ನಿರೀಕ್ಷೆ ಮತ್ತು ಸಂದರ್ಭ ಕೇಂದ್ರ ಸರ್ಕಾರದ ಮುಂದೆ ಇಲ್ಲ. ಬೇರೆ ಹಲವು ಆಯ್ಕೆಗಳನ್ನು ಭಾರತ ಎದುರು ನೋಡುತ್ತಿದೆ. ಟ್ರಂಪ್ ಅವರ ಭೇಟಿ, ದಿನಾಂಕ, ಸಮಯ ಮತ್ತು ಸಂದರ್ಭಗಳು ಇನ್ನೂ ಪರಿಶೀಲನೆಯಲ್ಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಟ್ರಂಪ್ ಅವರು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತ ಭೇಟಿ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸಂಡರ್ಸ್ ಹೇಳಿದ್ದಾರೆ.

Facebook Comments

Sri Raghav

Admin