ದೇಹದ ಯಾವ ಭಾಗದಲ್ಲಿ ಮಚ್ಛೆ ಇದ್ದರೆ ಒಳ್ಳೆಯದು…ಯಾವ ಜಾಗದಲ್ಲಿ ಇರಬಾರದು..!

ಈ ಸುದ್ದಿಯನ್ನು ಶೇರ್ ಮಾಡಿ

Macche--01

ಒಮ್ಮೆ ನಮ್ಮ ದೇಹವನ್ನು ಕೊಂಚ ಕೂಲಂಕಶವಾಗಿ ಅವಲೋಕಿಸಿ ಕೊಂಡರೆ, ಹಲವಾರು ಮಚ್ಚೆಗಳನ್ನು ಕಾಣಬಹುದು. ಸಾಮಾನ್ಯವಾಗಿ ಮಚ್ಚೆ ಎಂದರೆ ಹುಟ್ಟಿನಿಂದಲೇ ಬಂದಿರುವ ಒಂದು ಗುರುತು. ಇದು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಅಕಾರಗಳಲ್ಲಿರುತ್ತದೆ. ದೇಹದ ಮೇಲೆ ಈ ರೀತಿಯಾಗಿ ಕಾಣುವ ಮಚ್ಚೆಗಳು ನಮ್ಮ ಹಿಂದಿನ ಜೀವನದ ರಹಸ್ಯದ ಮುದ್ರೆಗಳು ಎಂದು ನಮ್ಮ ಪೂರ್ವಜರು ಹೇಳುತ್ತಾರೆ.

ಬಹಳಷ್ಟು ಜನರ ಶರೀರದ ಮೇಲೆ ಹುಟ್ಟು ಮಚ್ಚೆಗಳಿರುತ್ತವೆ. ಅವು ಎಲ್ಲಿದ್ದರೆ ಎಂತಹ ಪರಿಣಾಮಗಳು ಬೀರುತ್ತವೆಂದು ಒಮ್ಮೆ ಪರಿಶೀಲಿಸೋಣ. ಬಲಗೆನ್ನೆ ಮೇಲೆ ಮಚ್ಚೆಯಿದ್ದರೆ…ಯುಕ್ತವಯಸ್ಸು ಬಂದತಕ್ಷಣ ಮದುವೆಯಾಗುತ್ತದೆಂದು ತಜ್ಞರು ಹೇಳುತ್ತಾರೆ. ಹಣೆಯ ಬಲಭಾಗದಲ್ಲಿ ಕಣಿತೆ ಮೇಲೆ ಹುಟ್ಟುಮಚ್ಚೆಯಿದ್ದರೆ ಧನಪ್ರಾಪ್ತಿಯಾಗುತ್ತದಂತೆ. ಕಣ್ಣಿನ ಹುಬ್ಬುಗಳಮೇಲಿದ್ದಲ್ಲಿ ಬೇಗ ಮದುವೆಯಾಗುತ್ತದಂತೆ. ಬಲ ಕಿವಿ,ಅಥವಾ ಎಡ ಕಿವಿಯಮೇಲೆ ಹುಟ್ಟು ಮಚ್ಚೆಯಿದ್ದರೆ…ಧನವಂತರು ಹಾಗೂ ಗೌರವನೀಯರಾಗುತ್ತಾರಂತೆ.

Mole--03

ಕಣ್ಣಿನ ಎಡ ಒಳಭಾಗದಲ್ಲಿಇದ್ದಲ್ಲಿ ಮನಸ್ತಾಪವುಳ್ಳವರಾಗಿರುತ್ತಾರೆ. ಮೂಗಿನ ಹೊಳ್ಳೆಗಳಲ್ಲಿದ್ದರೆ ಅದೃಷ್ಟವಂತರಾಗುತ್ತಾರೆ. ಮೂಗಿನ ಮೇಲಿದ್ದರೆ, ಹೆಚ್ಚಿಗೆ ಪ್ರಯಾಣ ಮಾಡುತ್ತಾರೆ. ಗಲ್ಲದ ಮೇಲಿದ್ದರೆ ಪ್ರಭಾವಿಶಾಲಿಗಳಾಗುತ್ತಾರೆ. ತುಟಿಯ ಮೇಲಿದ್ದರೆ ತಿಂಡಿಪೋತರಾಗುತ್ತಾರೆ. ಕುತ್ತಿಗೆಯ ಮೇಲಿದ್ದರೆ ಭಾಗ್ಯವತಿಯಾದ ಮಡದಿ ದೊರೆಯುತ್ತಾಳೆ. ಕತ್ತಿನ ಬಲಭಾಗದಲ್ಲಿದ್ದರೆ ಬಹಳ ಪ್ರಖ್ಯಾತರಾಗುತ್ತಾರೆ. ಭುಜದ ಮೇಲಿದ್ದರೆ ಬಾಧೆಗಳನ್ನು ಅನುಭವಿಸುತ್ತಾರೆ. ಎಡ ಭುಜದ ಮೇಲಿದ್ದರೆ ಜಗಳಗಂಟಿಗಳಾಗುತ್ತಾರೆ. ಬಲಗೈ ಅಥವಾ ಬಲಭುಜದ ಮೇಲಿದ್ದರೆ ಬುದ್ಧಿವಂತರಾಗುತ್ತಾರೆ ಹಾಗೂ ದೂರದೃಷ್ಟಿ ಉಳ್ಳವರಾಗಿರುತ್ತಾರೆ.

ಕಂಕುಳ, ಹೃದಯಕ್ಕೆ ಹತ್ತಿರದಲ್ಲಿದ್ದರೆ ಧನವಂತರಾಗುತ್ತಾರೆ. ಗೌರವನೀಯರಾಗಿರುತ್ತಾರೆ. ಕೈಮೇಲಿದ್ದರೆ…ಐಶ್ವರ್ಯವತಿಯಿಂದ ಸುಖಪಡೆಯುತ್ತಾರೆ. ಬಲ ಸ್ತನದ ಮೇಲಿದ್ದರೆ ಒಳ್ಳೆಯ ಬುದ್ಧಿಯನ್ನು ಹೊಂದಿದ್ದು, ಕಷ್ಟಪಟ್ಟು ಕೆಲಸಮಾಡುತ್ತಾರೆ.

Mole--02

ನಮ್ಮ ಮೈಮೇಲೆ ಕೆಲವು ಕಡೆ ಹುಟ್ಟು ಮಚ್ಚೆಗಳು ಇದ್ದರೆ ಒಳ್ಳೆಯ ಲೈಂಗಿಕ ಸುಖವನ್ನು ಆಸ್ವಾಧಿಸುತ್ತಾರಂತೆ ಅದೆಲ್ಲೆಂದರೆ… ಹೆಬ್ಬೆರಳ ಕೆಳಗಿದ್ದರೆ ಅಂತಹ ಸ್ತ್ರೀಯರು ಒಬ್ಬರಿಗಿಂತಲೂ ಹೆಚ್ಚು ಮಂದಿಯೊಂದಿಗೆ ಲೈಂಗಿಕ ಸುಖ ಪಡೆಯಲು ಇಷ್ಟಪಡುತ್ತಾರಂತೆ. ಆದರೆ, ಗಂಡಸರು ಮಾತ್ರ ಹಿಂಜರಿಯುತ್ತಾರಂತೆ. ಬಲಗಣ್ಣಿನ ರೆಪ್ಪೆಯ ಮೇಲಿದ್ದರೆ ಹುಡುಗಿಯರನ್ನು ಲೈಂಗಿಕವಾಗಿ ತೃಪ್ತಿಪಡಿಸಲು ಯಾವುದೇ ಗಂಡಸಿನಿಂದಲೂ ಸಾಧ್ಯವಿಲ್ಲವಂತೆ.

ಜನನೇಂದ್ರಿಯಗಳ ಬಳಿ ಹುಟ್ಟುಮಚ್ಚೆಗಳು ಇದ್ದರೆ, ದಂಪತಿಗಳಿಬ್ಬರೂ ಲೈಂಗಿಕ ಸುಖವನ್ನು ಸಮನಾಗಿ ಪಡೆಯುತ್ತಾರಂತೆ. ಹೆಂಗಸರ ತೊಡೆಯಮೇಲೆ ಹುಟ್ಟುಮಚ್ಚೆಯಿದ್ದಲ್ಲಿ ಪ್ರೇಮಮಯಿಯಾಗಿದ್ದು ಅನ್ಯೋನ್ಯವಾದ ಜೀವನವನ್ನು ಕಳೆಯುತ್ತಾರಂತೆ. ಎದೆಯಮೇಲೆ ಹುಟ್ಟಿಮಚ್ಚೆಗಳಿದ್ದರೆ ಯೌವನದಲ್ಲಿ ವಿಪರೀತವಾದ ಕೋರಿಕೆಗಳಿರುತ್ತವಂತೆ. ಆದರೆ, ಲೈಂಗಿಕ ಕ್ರಿಯೆಯಲ್ಲಿ ಹೆಚ್ಚುಕಮ್ಮಿಯಾಗುತ್ತದಂತೆ.

Facebook Comments

Sri Raghav

Admin