ಆಫ್ಘನ್’ನ ಘಜ್ನಿ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ತಾಲಿಬಾನಿಗಳ ಯತ್ನ, 14 ಪೊಲೀಸರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Taliban--01
ಕಾಬೂಲ್, ಆ.10-ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದೆ. ಘಜ್ನಿ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಯತ್ನಿಸಿದ ಬಂಡುಕೋರರು 14 ಪೊಲೀಸರನ್ನು ಕೊಂದು, ಹಲವರನ್ನು ಗಾಯಗೊಳಿಸಿದ್ದಾರೆ. ಪ್ರಾಂತ್ಯದ ರಾಜಧಾನಿ ಮೇಲೆ ಪ್ರಾಬಲ್ಯ ಹೊಂದಲು ತಾಲಿಬಾನ್ ಉಗ್ರರು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 14 ಮಂದಿ ಪೊಲೀಸರು ಹತರಾದರು. ಘರ್ಷಣೆ ಮುಂದುವರೆದಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

Facebook Comments

Sri Raghav

Admin