ನಾಲ್ವರು ಕುಖ್ಯಾತ ನಕ್ಸಲರ ಬಂಧನ, ಭಾರಿ ಆಸ್ತಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

Naxal-01
ಗಯಾ, ಆ.11-ಕುಖ್ಯಾತ ನಕ್ಸಲ್ ಸೇರಿದಂತೆ ನಾಲ್ವರು ಮಾವೋವಾದಿಗಳನ್ನು ಬಂಧಿಸಿರುವ ಬಿಹಾರ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ನಕ್ಸಲೀಯರ ಮುಖಂಡನೊಬ್ಬನಿಗೆ ಸೇರಿದ 30 ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿ-ಪಾಸ್ತಿ ವಶಪಡಿಸಿಕೊಂಡಿದ್ದಾರೆ.  ಬಿಹಾರದ ಗಯಾದ ಪ್ರತ್ಯೇಕ ಸ್ಥಳಗಳಲ್ಲಿ ಪೊಲೀಸರು ನಾಲ್ವರು ನಕ್ಸಲೀಯರನ್ನು ಬಂಧಿಸಿದ್ದಾರೆ. ಇವರಲ್ಲಿ ಅಶೋಕ್ ಮೆಹ್ತೊ ಕುಖ್ಯಾತ ಮಾವೋವಾದಿ. ಈತ ಬಿಹಾರ ಮತ್ತು ರಾಜಸ್ತಾನದ ಹಲವೆಡೆ ವಿವಿಧ ನಕ್ಸಲ್ ಕುಕೃತ್ಯಗಳಲ್ಲಿ ಶಾಮೀಲಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಶೋಕ್ ಗಯಾದಲ್ಲಿನ ಇಮಾಮ್‍ಗಂಜ್ ಮತ್ತು ಜೆರುವಾ ಪೊಲೀಸ್ ಠಾಣೆ ಸರಹದ್ದಿನಲ್ಲಿ ಹಾಗೂ ರಾಜಸ್ತಾನದ ಕೆಲವೆಡೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ವಿವರಿಸಿದ್ದಾರೆ.  ಇದೇ ವೇಳೆ ಹಣ ದುರ್ಬಳಕೆ ಪ್ರಕರಣ ಸಂಬಂಧ ಮಾವೋವಾದಿ ನಾಯಕ ಸಂದೀಪ್ ಯಾದವ್ ಅಲಿಯಾಸ್ ವಿಜಯ್ ಯಾದವ್ ಅಲಿಯಾಸ್ ರೂಪೇಶ್ ಎಂಬಾತನಿಗೆ ಸೇರಿದ 50 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಸಂದೀಪ್ ಯಾದವ್ ಗಯಾ ಜಿಲ್ಲೆಯಲ್ಲಿ ಲುಟುವಾ ಗ್ರಾಮದ ನಿವಾಸಿಯಾಗಿದ್ದು, ಈಗ ತಲೆಮರೆಸಿಕೊಂಡಿದ್ಧಾನೆ. ನಕ್ಸಲ್ ಕೃತ್ಯಗಳಿಗೆ ಸಂಬಂಧಪಟ್ಟಂತೆ ಬಿಹಾರ, ಜಾರ್ಖಂಡ್, ಓಡಿಶಾ ಮತ್ತು ಛತ್ತೀಸ್‍ಗಢ ಸೇರಿ ವಿವಿಧ ರಾಜ್ಯಗಳ ಅನೇಕ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ದ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Facebook Comments

Sri Raghav

Admin