ಸಿಎಂ ಕುಮಾರಸ್ವಾಮಿ ಗದ್ದೆಯಲ್ಲಿ ಪಂಚೆ ಮೇಲೆತ್ತಿ ಕಟ್ಟಿ ನಾಟಿ ಮಾಡಿದ ಕ್ಷಣಗಳು

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಆ.11- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಸ್ವತಃ ಗದ್ದೆಗಿಳಿದು ನಾಟಿ ಮಾಡುವ ಮೂಲಕ ರೈತರ ಮನಗೆದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮದ ಗದ್ದೆಯಲ್ಲಿ ಸಚಿವ ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಮುಖಂಡರು ಹಾಗೂ ರೈತರೊಂದಿಗೆ ಭತ್ತದ ಪೈರುಗಳನ್ನು ನಾಟಿ ಮಾಡಿದರು.

ಭತ್ತ ನಾಟಿ ಮಾಡುವ ಮುನ್ನ ಜೋಡೆತ್ತಿಗೆ ಮುಖ್ಯಮಂತ್ರಿ ನಮಸ್ಕರಿಸಿದರು. ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗದ್ದೆಗಿಳಿದು ಭತ್ತ ನಾಟಿ ಮಾಡಲು ಆರಂಭಿಸುತ್ತಿದ್ದಂತೆ ತುಂತುರು ಮಳೆ ಪ್ರಾರಂಭವಾಗಿ ನೆರೆದಿದ್ದ ಜನರಲ್ಲಿ ಸಂತಸವನ್ನು ಉಂಟು ಮಾಡಿತ್ತು. ಸೀತಾಪುರ ಗ್ರಾಮದ ಐದು ಎಕರೆ ಗದ್ದೆಯಲ್ಲಿ ಭತ್ತ ನಾಟಿ ಮಾಡಲು ನಿನ್ನೆಯಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಾಟಿ ಮಾಡಲು ಆಗಮಿಸಿದ ಮುಖ್ಯಮಂತ್ರಿಗೆ ಸ್ವಾಗತ ಕೋರಲು ತಳಿರು ತೋರಣಗಳಿಂದ ರಸ್ತೆಗಳನ್ನು ಸಿಂಗರಿಸಲಾಗಿತ್ತು. ಎತ್ತಿನ ಗಾಡಿಗಳನ್ನು ಕೂಡ ಅಲಂಕರಿಸಲಾಗಿತ್ತು.

WhatsApp Image 2018-08-11 at 3.15.47 PM

WhatsApp Image 2018-08-11 at 3.15.48 PM WhatsApp Image 2018-08-11 at 3.15.50 PM

WhatsApp Image 2018-08-11 at 2.12.18 PM

WhatsApp Image 2018-08-11 at 3.15.51 PM

WhatsApp Image 2018-08-11 at 3.15.52 PM

WhatsApp Image 2018-08-11 at 3.15.56 PM

WhatsApp Image 2018-08-11 at 3.15.57 PM(1)

WhatsApp Image 2018-08-11 at 3.15.57 PM

IMG-20180811-WA0180 IMG-20180811-WA0183 IMG-20180811-WA0185

Facebook Comments

Sri Raghav

Admin