ಪತ್ನಿಯನ್ನು ಕೊಂದು ಪತಿ ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

Wife--Murder--01
ಬೆಳಗಾವಿ,ಆ.11- ಪತಿಯೇ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ದೊಡ್ಡವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಲ್ಲಮ್ಮ ಬೆಳವಡೆ ಗ್ರಾಮದ ನಿವಾಸಿ ಸುಮಾ(21) ಕೊಲೆಯಾದ ಪತ್ನಿ. ಯುವರಾಜ್ ಮತ್ತು ಸುಮಾ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಸುಮಾಳ ಕೊಲೆಯಲ್ಲಿ ಜಗಳ ಅಂತ್ಯಗೊಂಡಿದೆ.  ಮೃತಳ ಅತ್ತೆ ಮಾದೇವಿ, ಮೈದುನರಾದ ವೀರಣ್ಣ , ಯಲ್ಲಪ್ಪ , ಪತಿ ಯುವರಾಜ್ ತಲೆಮರೆಸಿಕೊಂಡಿದ್ದಾರೆ. ದೊಡ್ಡವಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಳೆದ ಹತ್ತು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಸುಮಾ ಯುವರಾಜ್  ಯುವಕನ ಮನೆಯಲ್ಲಿ ಮದುವೆಗೆ ವಿರೋಧದ ನಡುವೆಯೂ ಬೈಲಹೊಂಗಲದಲ್ಲಿ ರಿಜಿಸ್ಟರ್ ಮದುವೆಯಾಗಿದ್ದ ಜೋಡಿಗಳು.ಅತ್ತೆ ಮಾವ ಗ್ರಾಮದ ಹಿರಿಯರ ಮುಖಂಡತ್ವದಲ್ಲಿ ಮಗ ಹಾಗೂ ಸೊಸೆಯನ್ನ ಮನೆ ತುಂಬಿಸಿಕೊಂಡಿರುತ್ತಾರೆ.ಆದರೆ ಕುಟುಂಬಸ್ಥರೆಲ್ಲೆರೂ ಸೇರಿಕೊಂಡು‌‌ ನಿನ್ನೆ ಮನೆಯಲ್ಲಿ ಸೊಸೆ ಸುಮಾಳನ್ನು ಕೊಲೆ ಮಾಡಿ ಶವ ಬಿಟ್ಟು ಪರಾರಿಯಾಗಿದ್ದರೆ ದೊಡವಾಡ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪರಾರಿಯಾದ ಆರೋಪಿಗಳನ್ನು ಬಂಧಿಸುವಂತೆ ಯುವತಿ ಸಂಬಂಧಿಕರಿಂದ ಆಗ್ರಹ ಮಾಡುತ್ತಿದ್ದಾರೆ.

Facebook Comments

Sri Raghav

Admin