ಕೇರಳ ಪ್ರವಾಹ : ನದಿ ದಂಡೆಯಿಂದ 10,510 ಜನರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Kerala-Flood--01

ಕೊಚ್ಚಿ, ಆ.11-ಕೇರಳದ ಕೊಚ್ಚಿಯಲ್ಲಿರುವ ಪೆರಿಯಾರ್ ಮತ್ತು ಅದರ ಉಪ ನದಿಗಳು ಪ್ರವಾಹದಿಂದ ಭೋರ್ಗರೆಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನದಿ ದಂಡೆಗಳಿಂದ 10,5100ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.  ಎರ್ನಾಕುಲಂ ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ತೆರೆಯಲಾಗಿರುವ 78 ಪರಿಹಾರ ಶಿಬಿರಗಳಿಗೆ ಅವರನ್ನು ರವಾನಿಸಲಾಗಿದೆ. ಪರವೂರ್, ಅಳುವಾ, ಕಣಯನೂರು ಮತ್ತು ಕುನ್ನತುನಾಡ್ ತಾಲ್ಲೂಕುಗಳಲ್ಲಿ ಈ ಉದ್ದೇಶಕ್ಕಾಗಿ ಕ್ಯಾಂಪ್‍ಗಳನ್ನು ತೆರೆಯಲಾಗಿದೆ.   ಈ ಜಿಲ್ಲೆಯ ಎರಡು ಅಣೆಕಟ್ಟೆಗಳು ಭರ್ತಿಯಾಗಿ ಎಲ್ಲ ಗೇಟ್‍ಗಳನ್ನು ತೆರೆದಿರುವುದರಿಂದ ಭಾರೀ ಪ್ರಮಾಣದ ನೀರು ಹೊರ ಹೋಗುತ್ತಿದ್ದು, ನದಿ ದಂಡೆ ಪ್ರದೇಶಗಳ ಜನರನ್ನು ಸುರಕ್ಷತೆ ದೃಷ್ಟಿಸಿ ಸ್ಥಳಾಂತರಿಸಲಾಗಿದೆ.

Facebook Comments

Sri Raghav

Admin