ಫೇಸ್‍ಬುಕ್ ಲೈವ್‍ನಲ್ಲಿ ವಿವಾಹವಾದ ಪ್ರೇಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Facebook-Live--01

ತುಮಕೂರು, ಆ.11- ಫೇಸ್‍ಬುಕ್ ಲೈವ್ ಮಾಡಿಕೊಂಡು ಸಪ್ತಪದಿ ತುಳಿದ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್(25), ಅಂಜನಾ (19) ವಿವಾಹವಾದ ಜೋಡಿಗಳು. ಇವರ ಮದುವೆಗೆ ಹುಡುಗಿ ಮನೆಯವರ ವಿರೋಧವಿತ್ತು. ಇದರಿಂದ ಮನೆ ಬಿಟ್ಟ ಇವರಿಬ್ಬರೂ ಮದುವೆಯಾಗುವ ದೃಶ್ಯವನ್ನು ಫೇಸ್ ಬುಕ್‍ನಲ್ಲಿ ಲೈವ್ ಮಾಡಿದ್ದಾರೆ.

ನಾವಿಬ್ಬರು ಒಪ್ಪಿ ಮದುವೆಯಾಗಿದ್ದೇವೆ, ನಮ್ಮನ್ನು ದೂರ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಯುವತಿ ಹೇಳಿದ್ದಾರೆ. ಕಿರಣ್ ಮಧುಗಿರಿಯ ಕೆ.ಆರ್ ಬಡಾವಣೆಯ ನಿವಾಸಿಯಾಗಿದ್ದು, ಅಂಜನಾ ಬಿ.ಕಾಂ.ವಿದ್ಯಾರ್ಥಿನಿಯಾಗಿದ್ದಾರೆ. ದೇವಸ್ಥಾನದಲ್ಲಿ ಇವರಿಬ್ಬರೂ ತಾಳಿಕಟ್ಟಿಕೊಂಡು ಹಸೆಮಣೆ ಏರಿದ್ದಾರೆ. ಎರಡು ದಿನದ ಹಿಂದೆ ಅಂಜನಾ ಕಾಣೆಯಾಗಿರುವ ಬಗ್ಗೆ ಅವರ ತಂದೆ ತಿಮ್ಮರಾಜು ಅವರು ಮಧುಗಿರಿ ಪೊಲೀಸರಿಗೆ ದೂರು ನೀಡಿದ್ದರು.

Facebook Comments

Sri Raghav

Admin