ಆತ್ಮಹತ್ಯೆ ಮಾಡಿಕೊಳ್ಳಲು ವಿಮಾನವನ್ನೇ ಕದ್ದ ಆಸಾಮಿ..!

ಈ ಸುದ್ದಿಯನ್ನು ಶೇರ್ ಮಾಡಿ

Flite-sucid
ಸೀಟ್ಯಾಕ್ (ಅಮೆರಿಕ), ಆ.11- ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಖಾಲಿ ವಿಮಾನವೊಂದನ್ನು ಅಪಹರಿಸಿದ ವಿಮಾನಯಾನ ಸಂಸ್ಥೆಯ ಮೆಕ್ಯಾನಿಕ್ ಚಾಲನೆ ಮಾಡುತ್ತಿದ್ದ ಏರ್‍ಲೈನ್ ಪತನಗೊಂಡ ಘಟನೆ ಅಮೆರಿಕದ ಸೀಟ್ಯಾಕ್‍ನಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ವಿಮಾನ ಅಪಹರಣಕಾರನಿಗೆ ಗಂಭೀರ ಗಾಯಗಳಾಗಿವೆ.

ಸೀಟ್ಯಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 29 ವರ್ಷದ ಮೆಕ್ಯಾನಿಕ್ ನಿನ್ನೆ ರಾತ್ರಿ ವಿಮಾನವೊಂದನ್ನು ಅಪಹರಿಸಿದ. ಸುದ್ದಿ ತಿಳಿದ ಕೂಡಲೇ ಸೇನಾ ವಿಮಾನ ಅಪಹೃತ ಏರ್‍ಲೈನ್‍ಅನ್ನು ಬೆನ್ನಟ್ಟಿತು.  ಕೆಲಕಾಲ ಆಗಸದಲ್ಲಿ ವಿಮಾನದೊಂದಿಗೆ ಕಸರತ್ತು ಪ್ರದರ್ಶಿಸಿದ ನಂತರ ಅಪಹೃತನಿದ್ದ ವಿಮಾನ ಸಣ್ಣ ದ್ವೀಪವೊಂದರಲ್ಲಿ ಪತನಗೊಂಡಿತು. ಈ ದುರಂತದಲ್ಲಿ ಆತನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇದು ಅತಿರೇಕದ ಪರಮಾವಧಿ. ವಿಮಾನ ಚಾಲನೆಯ ಕೌಶಲ್ಯವಿಲ್ಲದ ಮೆಕ್ಯಾನಿಕ್ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಏರ್‍ಲೈನ್ ಅಪಹರಿಸಿ ಅಪಘಾತ ಮಾಡಿದ್ದಾನೆ. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನೆಲೆಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Facebook Comments

Sri Raghav

Admin