ಹೊಸ ಹ್ಯಾರಿ ಪಾಟರ್ ಟ್ರೀಟ್‍ಗಳ ಅನಾವರಣ

ಈ ಸುದ್ದಿಯನ್ನು ಶೇರ್ ಮಾಡಿ

DS-1
ಹ್ಯಾರಿ ಪಾಟರ್ ಕಥೆಗಳು ಮತ್ತು ಸಿನಿಮಾ ಸದಾ ಒಂದಿಲ್ಲೊಂದು ಸುದ್ದಿ ಮಾಡುತ್ತಲೇ ಇರುತ್ತವೆ. ಇವುಗಳಿಂದ ಸ್ಫೂರ್ತಿ ಪಡೆದಂತೆ ಹೊಸ ಹೊಸ ಸಂಗತಿಗಳೂ ನಡೆಯುತ್ತವೆ. ಇದೀಗ ಯೂನಿವರ್ಸಲ್ ಸ್ಟುಡಿಯೋದಲ್ಲಿ ಹೊಸ ಹ್ಯಾರಿ ಪಾಟರ್ ಟ್ರೀಟ್‍ಗಳನ್ನು ಅನಾವರಣಗೊಳಿಸಲಾಗಿದೆ.  ಹ್ಯಾರಿ ಪಾಟರ್ ಅಭಿಮಾನಿಗಳು ಮತ್ತಷ್ಟು ಎಂಜಾಯ್ ಮಾಡಲು ಈಗ ಮತ್ತೊಂದು ಕಾರಣವಿದೆ. ಅಮೆರಿಕದ ಯೂನಿವರ್ಸಲ್ ಸ್ಟುಡಿಯೋದ ಹ್ಯಾರಿ ಪಾಟರ್ ಪ್ರೇರಿತ ಸ್ಥಳ ವಿಜರ್ಡಿಂಗ್ ವಲ್ರ್ಡ್ ಥೀಮ್ ಪಾರ್ಕ್‍ನಲ್ಲಿ ಹೊಸ ವಸ್ತುಗಳು ಹಾಗೂ ರುಚಿಕರ ಟ್ರೀಟ್‍ಗಳು ಸೇರ್ಪಡೆಯಾಗಿ ಅಭಿಮಾನಿಗಳಿಗೆ ಖುಷಿ ನೀಡುತ್ತಿದೆ.

DS

ಹ್ಯಾರಿ ಪಾಟರ್‍ನ ಪ್ರಸಿದ್ಧ ಬಟರ್ ಬಿಯರ್ ಈಗ ಇಲ್ಲಿ ಹೊಸ ರೂಪ ಪಡೆದಿದೆ. ಐಸ್ ಕ್ರೀಮ್ ಲೈನ್‍ನೊಂದಿಗೆ ಬಟರ್‍ಬಿಯರ್‍ನನ್ನು ಇಲ್ಲಿ ಪರಿಚಯಿಸಲಾಗಿದೆ. ಇಲ್ಲಿ ಅಭಿಮಾನಿಗಳಿಗೆ ಟ್ರೀಟ್ ನೀಡಲು ಮಿಠಾಯಿ ಸಾಲುಗಳೂ ಇವೆ.  ಈ ಥೀಮ್ ಪಾರ್ಕ್‍ನಲ್ಲಿ ಅಭಿಮಾನಿಗಳ ಮನರಂಜನೆ ಮತ್ತು ಜಿಹ್ವಾ ಚಾಪಲ್ಯ ತಣಿಸಲು ಹೊಸ ಹೊಸ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೇ ಹ್ಯಾರಿ ಪಾಟರ್ ಪ್ರೇರಿತ ವಸ್ತ್ರಗಳು. ಪೋಷಾಕುಗಳು ಮತ್ತು ಅದರಲ್ಲಿ ಪಾತ್ರಗಳ ದಿರಿಸುಗಳು ಇಲ್ಲಿ ಲಭ್ಯ.

Facebook Comments

Sri Raghav

Admin