ಹಳಿ ದಾಟುವಾಗ ರೈಲಿಗೆ ಸಿಲುಕಿ ಯುವಕ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Train-Accident
ಹಾಸನ,ಆ.11- ರೈಲು ಬರುತ್ತಿರುವುದನ್ನು ಗಮನಿಸದೆ ಹಳಿ ದಾಟಲು ಮುಂದಾದ ಯುವಕನೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಕಂತೇನಹಳ್ಳಿ ನಿವಾಸಿ ವಿಜಯಕುಮಾರ್(24) ಮೃತಪಟ್ಟ ಯುವಕ. ಅರಸೀಕೆರೆ ಹೊರವಲಯದ ಕಂತೇನಹಳ್ಳಿಯ ಬಳಿ ರೈಲು ಬರುವುದನ್ನು ಗಮನಿಸದೆ ಹಳಿ ಮೇಲೆ ನಡೆದು ಹೋಗುತ್ತಿದ್ದಾಗ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಮೃತ ಯುವಕ ಛಾಯಾಗ್ರಾಹಕನಾಗಿದ್ದ ಎಂದು ತಿಳಿದು ಬಂದಿದೆ. ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin