ನನ್ನ ಆಡಳಿತದಲ್ಲಿ ಒಂದು ಕಪ್ಪು ಚುಕ್ಕೆಯೂ ಇಲ್ಲ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--01
ಬೆಂಗಳೂರು, ಆ.12- ಪ್ರಜಾಪ್ರಭುತ್ವ ವ್ಯವಸ್ಥೆ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು, ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಮಾಜಿ ಸಂಸದ ಡಾ.ಬಿ.ಎಲ್.ಶಂಕರ್, ಪ್ರೊ.ವಲೇರಿಯನ್ ರೊಡ್ರಿಗರ್ ಅವರ ಭಾರತದ ಸಂಸತ್ತು ಒಂದು ಕಾರ್ಯನಿರತ ಪ್ರಜಾಪ್ರಭುತ್ವ ಕೃತಿಯ ಪ್ರೊ.ಜೆ.ಎಸ್.ಸದಾನಂದ ಅವರು ಅನುವಾದ ಮಾಡಿರುವ ಕನ್ನಡ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಮಾಜಿ ಪ್ರಧಾನಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂ ಅವರು ಪ್ರಜಾಪ್ರಭುತ್ವ ಭದ್ರವಾದ ಬುನಾದಿಯ ಮೇಲೆ ನಿಲ್ಲಲು ಅಡಿಪಾಯ ಹಾಕಿದ್ದಾರೆ. ಮಹಾತ್ಮಗಾಂಧೀಜಿಯವರು ಭಾರತದ ರಾಷ್ಟ್ರಪಿತ ಇದ್ದಂತೆ. ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ರಾಷ್ಟ್ರಪಿತ ನೆಹರೂ ಅವರು ಎಂದು ಶ್ಲಾಘಿಸಿದರು.
1952ರಲ್ಲಿ ನಡೆದ ಮೊದಲ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜಾತಿ ಪ್ರಭಾವ ಇರಲಿಲ್ಲ. ಭಾಷಾವಾರು ಪ್ರಾಂತ್ಯ ವಿಂಗಡಣೆಯಾದ ನಂತರ ಆಯಾ ಪ್ರಾಂತ್ಯಗಳಲ್ಲಿ ಜಾತಿಯ ಹಿಡಿತ ಪ್ರಾರಂಭವಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಚರ್ಚೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷ ದಿನೇ ದಿನೇ ಶಕ್ತಿ ಕಳೆದುಕೊಳ್ಳುತ್ತಿದ್ದು, ಪ್ರಾದೇಶಿಕ ಪಕ್ಷಗಳು ತಲೆ ಎತ್ತುತ್ತಿವೆ. ಜಾತಿ, ಭಾಷೆ ಪ್ರಭಾವವೂ ಹೆಚ್ಚಾಗುತ್ತಿದೆ. ತಾವು ಮೂಲ ಕಾಂಗ್ರೆಸ್‍ನಲ್ಲಿದ್ದು, ಬಂಡಾಯ ಕಾಂಗ್ರೆಸ್ ಮೂಲಕ ರಾಜಕೀಯಕ್ಕೆ ಬಂದು ಆರು ದಶಕಗಳು ಕಳೆದಿವೆ. ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಶೇ.33 ರಷ್ಟು ಮಹಿಳಾ ಪ್ರಾತಿನಿಧ್ಯ ಇರಬೇಕೆಂಬ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆಯಾಗಿದ್ದರೂ ಇನ್ನೂ ಲೋಕಸಭೆಯ ಅಂಗೀಕಾರ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾವು ಪ್ರಧಾನಿಯಾಗಿ 10 ತಿಂಗಳು 21 ದಿನದ ಆಡಳಿತದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯನ್ನೂ ಹೊರತರಲು ಸಾಧ್ಯವಾಗಿಲ್ಲ. 15 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ರಾಜಕೀಯ ಹುಚ್ಚು ಸಾಕಾಗಿದೆ. ಪ್ರಜೆಯಾಗಿ ಏನು ಮಾಡಬೇಕೆಂಬುದ್ಠು ಮನಸ್ಸಿನಲ್ಲಿದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪಾತ್ರ ಪ್ರಮುಖವಾಗಿದೆ. ತಾವು ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ನಿತ್ಯ ಒಂದಲ್ಲ ಒಂದು ವಿಚಾರ ಪ್ರಸ್ತಾಪ ಮಾಡಿದರೂ ಆಗಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಸಮರ್ಥವಾದ ಉತ್ತರ ಕೊಟ್ಟು ಆರೋಪಗಳನ್ನು ಅಲ್ಲಗಳೆಯುವ ಪ್ರಯತ್ನ ಮಾಡುತ್ತಿದ್ದರು. ಅರಸು ಅಂತಹವರು ಮತ್ತೊಬ್ಬರಿಲ್ಲ. ಸದನದ ನಾಯಕನ ಜವಾಬ್ದಾರಿಯನ್ನು ಬಹಳ ಮುಖ್ಯವಾಗಿ ನಿರ್ವಹಿಸಿದ್ದರು ಎಂದು ಶ್ಲಾಘಿಸಿದರು.
ಪಕ್ಷ ರಾಜಕಾರಣದಿಂದಾಗಿ

Facebook Comments

Sri Raghav

Admin