ಶೀಲದ ಶಂಕಿಸಿ ಪತ್ನಿಯನ್ನು ಇರಿದು ಕೊಂದ ಪತಿ

ಈ ಸುದ್ದಿಯನ್ನು ಶೇರ್ ಮಾಡಿ

Wife-Murder--01

ಬೆಂಗಳೂರು, ಆ.12- ಪತ್ನಿಯ ಶೀಲಶಂಕಿಸುತ್ತಿದ್ದ ಪತಿಯೊಬ್ಬ ಮನೆಯಲ್ಲೇ ಚಾಕುವಿನಿಂದ ಇರಿದು ಪತ್ನಿಯನ್ನು ಕೊಲೆ ಮಾಡಿದ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಉತ್ತರ ಭಾರತ ಮೂಲದ ಶಹನಾಜ್ ಬೇಗಂ (20) ಕೊಲೆಯಾದವರು. ಆರೋಪಿ ಪತಿ ಅಬ್ದುಲ್ ಹನ್ನಾನ್ ತಲೆಮರೆಸಿಕೊಂಡಿದ್ದಾನೆ. ದಂಪತಿ ಇಲ್ಲಿನ ನ್ಯಾನಪ್ಪನಹಳ್ಳಿಯಲ್ಲಿ ವಾಸವಾಗಿದ್ದರು.ಒಂದೂವರೆ ವರ್ಷದ ಹಿಂದೆ ಶಹನಾಜ್ ಬೇಗಂ ಅವರನ್ನು ಮದುವೆಯಾಗಿದ್ದ ಆರೋಪಿ ಹನ್ನಾನ್, ನಗರದಲ್ಲಿ ಮೊಬೈಲ್ ಟವರ್ ಮತ್ತು ಸೆಂಟ್ರಿಂಗ್ ಟವರ್ ನಿರ್ಮಿಸುವ ಕೆಲಸ ಮಾಡುತ್ತಿದ್ದಾನೆ.

ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ದಂಪತಿ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಇಂದು ಬೆಳಗ್ಗೆ 8.30ರ ವೇಳೆ ಇದೇ ವಿಷಯದಲ್ಲಿ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಹನ್ನಾನ್ ಚಾಕುವಿನಿಂದ ಪತ್ನಿಯ ಬೆನ್ನು, ಕುತ್ತಿಗೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬೇಗಂ ಸಾವನ್ನಪ್ಪಿದ್ದಾರೆ.

ಇದಾದ ಬಳಿಕ ಆರೋಪಿ ಹನ್ನಾನ್ ತನ್ನ ಮನೆಯಿಂದ 200 ಮೀಟರ್ ದೂರದಲ್ಲಿರುವ ಅತ್ತೆಯ ಮನೆಗೆ ಹೋಗಿ ಅಲ್ಲಿಯೂ ಸಹ ಜಗಳ ತೆಗೆದು ಅತ್ತೆ ಮತ್ತು ನಾದಿನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವಿಷಯ ತಿಳಿದ ಹುಳಿಮಾವು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

Facebook Comments

Sri Raghav

Admin