ನಕಲಿ ಕೀ ಬಳಸಿ ಬೈಕ್ ಕದಿಯುತ್ತಿದ್ದ ಆರೋಪಿಗಳು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Bike-Kunigal
ಕುಣಿಗಲ್,ಆ.12-ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಬಾಲಾಪರಾಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಅಮೃತೂರು ಠಾಣೆ ಪೊಲೀಸರು ಬಂಧಿಸಿ ಏಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹುತ್ರಿದುರ್ಗ ಹೋಬಳಿಯ ಕೊರಮರಪಾಳ್ಯ ನಿವಾಸಿ ರವಿಕುಮಾರ್(29) ಬಂಧಿತನಾಗಿದ್ದು, ಮತ್ತೊಬ್ಬ ಬಾಲಾಪರಾಧಿಯಾಗಿದ್ದಾನೆ.

ರವಿಕುಮಾರ್ ಮತ್ತು ಬಾಲಾಪರಾಧಿ ಇಬ್ಬರು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಬಳಿ ಬಿದಿರು ಕಡಿಯುವ ಕೆಲಸ ಮಾಡುತ್ತಿದ್ದರು. ಆದರೆ ಕೆಲಸವನ್ನು ಬಿಟ್ಟು ಬೈಕ್ ಕಳ್ಳತನಕ್ಕೆ ಇಳಿದಿದ್ದರು.  ಕಲೆದ 7ರಂದು ಅಮೃತೂರು ಠಾಣೆ ಪಿಎಸ್‍ಐ ಅನಿಲ್‍ಕುಮಾರ್ ಮತ್ತು ಸಿಬ್ಬಂದಿಗಳು ರಾಷ್ಟ್ರೀಯ ಹೆದ್ದಾರಿ 75ರ ನಾಗೇಗೌಡನ ಪಾಳ್ಯದ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾಗ ಬೆಂಗಳೂರಿನಿಂದ ಇಬ್ಬರು ಊರಿಗೆ ಬೈಕ್‍ನಲ್ಲಿ ತೆರಳುತ್ತಿದ್ದರು.

ಪೊಲೀಸರನ್ನು ಕಂಡ ಈ ಇಬ್ಬರು ವಾಪಸ್ಸಾಗಲು ಮುಂದಾಗಿದ್ದಾರೆ. ಅನುಮಾನಗೊಂಡ ಪೊಲೀಸರು ಅವರನ್ನು ಬೆನ್ನಟ್ಟಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಈ ವೇಳೆ ನಕಲಿ ಕೀ ಬಳಸಿ ಬೈಕ್ ಕಳ್ಳತನ ನಡೆಸುತ್ತಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಬಂಧಿತರಿಂದ ಏಳು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Facebook Comments

Sri Raghav

Admin