ಪಾಕಿಸ್ತಾನದಲ್ಲಿ ಸರ್ಕಾರ ರಚಿಸಲು ಪಿಟಿಐಗೆ ಇನ್ನೂ14 ಸ್ಥಾನಗಳ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

Imran-Khan--01

ಇಸ್ಲಾಮಾಬಾದ್, ಆ.12-ಪಾಕಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಸನ್ನದ್ದವಾಗಿರುವ ಭವಿಷ್ಯದ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಪಕ್ಷದ ಬಹುಮತಕ್ಕೆ 14 ಸಂಖ್ಯೆಗಳ ಕೊರತೆ ಎದುರಾಗಿದೆ.  ಇದೇ ತಿಂಗಳು 18ರಂದು ನೂತನ ಪ್ರಧಾನಿಯಾಗಿ ಇಮ್ರಾನ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಬಹುಮತ ಸಾಬೀತು ಮಾಡಲು ಸಣ್ಣ ಪಕ್ಷಗಳ ಬೆಂಬಲ ಅವಲಂಬಿಸುವಂತಾಗಿದೆ. ಚುನಾವಣಾ ಆಯೋಗವು ಪಿಟಿಐನಲ್ಲಿ 28 ಮೀಸಲು ಸ್ತಾನಗಳನ್ನು ಮಹಿಳೆಯರಿಗೆ ಹಾಗೂ ಐದನ್ನು ಮುಸ್ಲಿಮೇತರಿಗೆ ಮಂಜೂರು ಮಾಡಿದೆ. ಇದರಿಂದ ಪಾರ್ಲಿಮೆಂಟ್‍ನಲ್ಲಿ ಪಿಟಿಐ ಪಕ್ಷದ ಸಂಖ್ಯೆ 158 ಆಗಿದ್ದರೂ, ಬಹುಮತ ಸಾಬೀತು ಮಾಡಲು ಇನ್ನೂ 14 ಸ್ತಾನಗಳ ಕೊರತೆ ಎದುರಾಗಿದೆ.

ಚುನಾಯಿತ ಸದಸ್ಯರ ಅಂತಿಮ ಪಟ್ಟಿಯ ಆಧಾರದ ಮೇಲೆ ನಿನ್ನೆ ಪಾಕಿಸ್ತಾನ ಚುನಾವಣಾ ಆಯೋಗ ಮೀಸಲು ಸ್ಥಾನಗಳನ್ನು ಹಂಚಿಕೆ ಮಾಡಿದೆ. ಬಹುಮತ ಸಾಬೀತು ಮಾಡಲು ಸಂಖ್ಯಾ ಬಲದ ಬೆನ್ನಟ್ಟಿರುವ ಇಮ್ರಾನ್ ಮತ್ತು ಪಿಟಿಐ ಮುಖಂಡರು ಸಣ್ಣ ಪ್ರಾದೇಶಿಕ ಪಕ್ಷಗಳ ಬೆಂಬಲಕ್ಕಾಗಿ ಹಾತೊರೆಯುತ್ತಿದ್ದಾರೆ.

Facebook Comments

Sri Raghav

Admin