ಭಾರತಕ್ಕೆ ವಯಸ್ಸಾಗುತ್ತಿದೆಯೇ..? 2050ರ ವೇಳೆಗೆ 340 ದಶಲಕ್ಷಕ್ಕೇರಲಿದೆ ವೃದ್ಧರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Oldage--01
ನವದೆಹಲಿ, ಆ.12-ಭಾರತಕ್ಕೆ ಬಹು ಬೇಗನೇ ವಯಸ್ಸಾಗುತ್ತದೆಯೇ..! ಸಾರ್ಕ್ ರಾಷ್ಟ್ರಗಳು ಮತ್ತು ಚೀನಾಗಿಂತಲೂ ಎಲ್ಲ ಕ್ಷೇತ್ರಗಳಲ್ಲಿ ಭಾರತ ಪ್ರಗತಿ ಸಾಧಿಸುತ್ತಿದ್ದರೂ ನಾವು ಆಲೋಚಿಸಿದ್ದಕ್ಕಿಂತ ಮುನ್ನವೇ ಭಾರತದ ಜನಸಂಖ್ಯೆಗೆ ವಯಸ್ಸಾಗುತ್ತಿದೆ ಎಂಬ ಸಂಗತಿಯನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿದೆ.

2050ರ ವೇಳೆಗೆ ಭಾರತದಲ್ಲಿ 60ಕ್ಕಿಂತ ಮೇಲ್ಪಟ್ಟ ವಯೋಮಾನದವರ ಸಂಖ್ಯೆ 340 ದಶಲಕ್ಷಗಳಿಗೆ ಏರಲಿದೆ. ಇದು ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ಲೆಕ್ಕಾಚಾರ ಹಾಕಿದ್ದಕ್ಕಿಂತ ಇದು ಅಧಿಕ ಪ್ರಮಾಣದಲ್ಲಿರುವುದು ಭಾರತೀಯರನ್ನು ಚಿಂತೆಗೀಡು ಮಾಡುವ ಸಂಗತಿ. ಇನ್ನು 32 ವರ್ಷಗಳಲ್ಲಿ ಅಂದರೆ 2050ರ ವೇಳೆಗೆ ಭಾರತದಲ್ಲಿ 60 ಮತ್ತು ಅದಕ್ಕೂ ಮೇಲ್ಪಟ್ಟ ವಯೋಮಾನದವರ ಸಂಖ್ಯೆ 340 ದಶಲಕ್ಷಕ್ಕೇರಲಿದೆ ಎಂಬ ವಿಷಯವನ್ನು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಅನುಪ್ರಿಯಾ ಪಟೇಲ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ವಯೋವೃದ್ಧ ವಿಧವೆಯರು ಹಾಗೂ ಅತಿ ಅವಲಂಬಿತ ಮಹಿಳೆಯರ ಒಟ್ಟಾರೆ ಜನಸಂಖ್ಯೆಗಿಂತಲೂ ಅತ್ಯಂತ ವೇಗವಾಗಿ ವೃದ್ಧರ ಜನಸಂಖ್ಯೆ ಬೆಳೆಯುತ್ತಿದೆ ಎಂಬ ಚಿಂತೆಗೀಡು ಮಾಡುವ ಸಂಗತಿಯೂ ಸಹ ಬೆಳಕಿಗೆ ಬಂದಿವೆ.

ಕೇಂದ್ರ ಸರ್ಕಾರ ವಯೋವೃದ್ಧರ ಹೆಚ್ಚಳ ಸಂಖ್ಯೆಯನ್ನು 340 ದಶಲಕ್ಷ ಎಂದು ಹೇಳಿದ್ದರೆ, ಹೆಲ್ಪ್‍ಏಜ್ ಇಂಡಿಯಾ ಇದು 324 ದಶಲಕ್ಷ ಎಂದು ಅಂಕಿಅಂಶ ನೀಡಿದೆ. ವಿಶ್ವಸಂಸ್ಥೆ ಪ್ರಕಾರ ಇದು 318.6 ದಶಲಕ್ಷ. ಈ ವ್ಯತ್ಯಾಸ ಏನೇ ಇದ್ದರೂ ಇದು ಭಾರತಕ್ಕೆ ನುಂಗಲಾರದ ತುತ್ತಾಗಿರುವುದಂತೂ ನಿಜ.
2050ರ ಅವಧಿಯಲ್ಲಿ ಭಾರತದ ಒಟ್ಟು ಜನಸಂಖ್ಯೆ ಶೇ.56ರಷ್ಟು ಹೆಚ್ಚಾಗಲಿದ್ದಾರೆ. 60 ವರ್ಷಗಳಿಗಿಂತ ಮೇಲ್ಪಟ್ಟವರ ಸಂಖ್ಯೆ ಶೇ.326ರಷ್ಟು ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಇದೇ ಅವಧಿಯಲ್ಲಿ 80 ವರ್ಷಗಳಿಗಿಂತ ಅಧಿಕ ವಯೋಮಾನದವರ ಸಂಖ್ಯೆ ಶೇ.700ರಷ್ಟು ವೃದ್ದಿಸಲಿದೆ. ಇದರಲ್ಲಿ ತುಂಬಾ ವಯಸ್ಸಾದ ವಿಧವೆಯರು ಹಾಗೂ ಅವಲಂಬಿತ ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿರುತ್ತಾರೆ ಎಂಬ ಮತ್ತೊಂದು ಆತಂಕದ ಸಂಗತಿ ಅಂಕಿ ಅಂಶಗಳಿಂದ ತಿಳಿದುಬಂದಿದೆ.

Facebook Comments

Sri Raghav

Admin