ಈ ಅಂಗನವಾಡಿಗೆ ಮಕ್ಕಳು ಬರ್ಲಿ ಬಿಡ್ಲಿ ಕೋತಿಗಳು ಮಾತ್ರ ಮಿಸ್ ಮಾಡಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Monkies
ತುಮಕೂರು, ಆ.12- ಇಲ್ಲಿನ ಶಾಲೆ, ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ದಿನನಿತ್ಯ ಸಕಾಲದಲ್ಲಿ ಆಗಮಿಸುತ್ತಾರೋ ಇಲ್ಲವೊ ಗೊತ್ತಿಲ್ಲ , ಆದ್ರೆ ವಾನರ ಸೇನೆಯೊಂದು ಸಕಾಲಕ್ಕೆ ಆಗಮಿಸಿ ಶಾಲೆ, ಅಂಗನವಾಡಿ ಕಟ್ಟಡದ ಮೇಲೆ ಠಳಾಯಿಸಿ ಅಲ್ಲಿನ ಪುಟ್ಟ ಮಕ್ಕಳು ಹಾಗೂ ಸಿಬ್ಬಂದಿ ಜೊತೆ ಕಣ್ಣಾಮುಚ್ಚಾಲೆ ಆಟ ಆಡುವುದು ಮಾತ್ರ ಇಲ್ಲಿನ ದಿನನಿತ್ಯದ ದೃಶ್ಯವಾಗಿದೆ.

ಮಕ್ಕಳು ಶಿಕ್ಷಣ ಕಲಿಯೋದು ಬಿಟ್ಟು ವಾನರ ಸೇನೆಯ ಉಪಟಳ ನಿಯಂತ್ರಣ ಮಾಡುತ್ತಾ ಕಾಲ ಕಳೆಯುವಂತಾಗಿದೆ. ತುಮಕೂರು ಹೊರವಲಯದ ಕುಂದೂರು ಗ್ರಾಮದಲ್ಲಿ ಪ್ರತಿನಿತ್ಯ ನೂರಾರು ಕೋತಿಗಳು ಮಕ್ಕಳಿಂದ ಸಿಹಿತಿನಿಸು ಕಿತ್ತುಕೊಂಡು ಓಡಿ ಹೋಗುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ.

ಕೋತಿಗಳ ಹಾವಳಿಯಿಂದ ಗ್ರಾಮದ ಜನ, ಪುಟ್ಟಕಂದಮ್ಮಗಳು, ಪೋಷಕರು ಭೀತಿಗೊಳಗಾಗಿದ್ದು, ಅವುಗಳನ್ನು ನಿಯಂತ್ರಿಸಲು ಮುಂದಾದರೆ ಅವರ ಮೇಲೆ ಎರಗಲು ಮುಂದಾಗುತ್ತವೆ. ಹಾಗಾಗಿ ಇವುಗಳ ಹಾವಳಿ ನಿಯಂತ್ರಿಸಿ ಮಕ್ಕಳು ನಿರಾತಂಕವಾಗಿ ಕಲಿಯಲು ಅವಕಾಶ ಮಾಡಿಕೊಡಲು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಅನಾಹುತ ಸಂಭವಿಸುವ ಮುನ್ನಾ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮಂಗಗಳ ಹಾವಳಿ ನಿಯಂತ್ರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin

One thought on “ಈ ಅಂಗನವಾಡಿಗೆ ಮಕ್ಕಳು ಬರ್ಲಿ ಬಿಡ್ಲಿ ಕೋತಿಗಳು ಮಾತ್ರ ಮಿಸ್ ಮಾಡಲ್ಲ..!

Comments are closed.