ಯಶಸ್ವಿಯಾಗಿ ಉಡಾವಣೆಯಾಯ್ತು ಸೂರ್ಯನನ್ನು ಚುಂಬಿಸಲಿರುವ ನಾಸಾ ನೌಕೆ

ಈ ಸುದ್ದಿಯನ್ನು ಶೇರ್ ಮಾಡಿ

Sun--01ಕೇಪ್ ಕಾರ್ನಿವಾಲ್, ಆ.12- ಇದೇ ಮೊದಲ ಬಾರಿಗೆ ಸೂರ್ಯನ ಪ್ರಭಾ ವಲಯವನ್ನು ಸ್ಪರ್ಶಿಸಲಿರುವ ಅಮೆರಿಕದ ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಚಾಲನೆ ದೊರೆತಿದೆ. ಪಾರ್ಕರ್ ಸೋಲಾರ್ ಪ್ರೊ ಬ್ ನೌಕೆ ಇಂದು ಮುಂಜಾನೆ ಕೇಪ್ ಕಾರ್ನ್‍ವಾಲ್‍ನಿಂದ ಯಶಸ್ವಿಯಾಗಿ ಉಡಾವಣೆಯಾಯಿತು. ಇದರೊಂದಿಗೆ ಸೂರ್ಯ ಶಿಖಾರಿ ಅಭಿಯಾನ ವಿದ್ಯುಕ್ತ ಆರಂಭಗೊಂಡಂತಾಗಿದೆ.60 ವರ್ಷಗಳ ಹಿಂದೆ ಸೌರ ಕಾಂತ ವಲಯದ ಅಸ್ತಿತ್ವವನ್ನು ಸಾರಿದ್ದ ಯೂಜಿನ್ ಪಾಕರ್ರ ಕೂಡ ಉಡಾವಣೆ ವೀಕ್ಷಿಸಲು ಆಗಮಿಸಿದ್ದರು. 91 ವರ್ಷ ವಯಸ್ಸಿನ ಯೂಜಿನ್ ಪಾರ್ಕರ್ ಗೌರವಾರ್ಥ ನೌಕೆಗೆ ಪಾಕರ್ರ ಎಂದು ಹೆಸರಿಡಲಾಗಿದೆ.

ಸೂರ್ಯನ ಸಮೀಪಕ್ಕೆ ಗುರಿ ಇಟ್ಟು ಉಡಾವಣೆಗೊಳ್ಳಲು ಒಂದೂವರೆ ನಿಮಿಷ ಇದೆ ಎನ್ನುವಾಗ ಕೇಪ್ ಕಾರ್ನಿವಾಲ್ ಉಡಾವಣಾ ಕೇಂದ್ರದಲ್ಲಿ ಸ್ತಬ್ಧ ಗೊಂಡಿತ್ತು. ಒಂದು ನಿಮಿಷ ವಿಳಂಬ ಮಾಡಿ ಉಡಾವಣೆಗೆ ಯತ್ನಿಸಲಾಯಿತಾದರೂ ಬಳಿಕ ಮುಂದೂಡಲಾಗಿದೆ. ಹೀಲಿಯಂ ಸಿಸ್ಟಮ್ನಲ್ಲಿರುವ ಅನಿಲದ ರೆಡ್ ಪ್ರರ್ಷ ಅಲಾರಂ ಕೆಲಸ ಮಾಡದ್ದು ಕಾರಣ ಎಂದು ನಾಸಾ ಹೇಳಿದೆ.

Facebook Comments

Sri Raghav

Admin