ಹುಬ್ಬಳ್ಳಿಯಲ್ಲಿ ಹೈಟೆಕ್ ನ್ಯಾಯಾಲಯ ಸಂಕೀರ್ಣ ಲೋಕಾರ್ಪಣೆ, ವಿಶೇಷತೆಗಳೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Supreme--01
ಬೆಂಗಳೂರು, ಆ.12- ಏಷ್ಯಾದಲ್ಲೇ ಸುಸಜ್ಜಿತವೆನಿಸಿದ ತಾಲ್ಲೂಕು ಮಟ್ಟದ ಕೋರ್ಟ್ ಕಟ್ಟಡಗಳಲ್ಲಿ ದೇಶದಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾದ ಹುಬ್ಬಳ್ಳಿಯ ತಿಮ್ಮಸಾಗರ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್‍ಮಿಶ್ರ ಅವರು ಅನಾವರಣಗೊಳಿಸಿದರು.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಮೋಹನ್ ಶಾಂತನಗೌಡರ್, ಹೈಕೋರ್ಟ್ ನ್ಯಾಯಾಧೀಶರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಈ ಮಹತ್ವದ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.
ಸುಮಾರು 122 ಕೋಟಿ ವೆಚ್ಚದಲ್ಲಿ 5.5 ಎಕರೆ ಜಾಗದಲ್ಲಿ ಸಂಪೂರ್ಣ ಹವಾನಿಯಂತ್ರಿತ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಇಂತಹ ಸೌಲಭ್ಯವುಳ್ಳ ತಾಲ್ಲೂಕು ಕಟ್ಟಡ ದೇಶದಲ್ಲಷ್ಟೇ ಅಲ್ಲ ಏಷ್ಯಾದಲ್ಲೇ ಮೊದಲನೆಯದ್ದಾಗಿದೆ.

ಮೊದಲ ಮಹಡಿಯಲ್ಲಿ ಜೆಎಂಎಫ್‍ಸಿ, ಎರಡನೇ ಮಹಡಿಯಲ್ಲಿ ಸಿವಿಲ್ ನ್ಯಾಯಾಲಯ, ಮೂರನೆ ಮಹಡಿಯಲ್ಲಿ ಸೀನಿಯರ್ ಸಿವಿಲ್, ನಾಲ್ಕನೆ ಮಹಡಿಯಲ್ಲಿ ಡಿಸ್ಟ್ರಿಕ್ ನ್ಯಾಯಾಲಯಗಳಿವೆ. ಐದನೆ ಮಹಡಿಯನ್ನು ವಕೀಲರ ಸಂಘಕ್ಕೆ ಬಿಟ್ಟುಕೊಡಲಾಗಿದೆ. ಮತ್ತೊಂದು ವಿಶೇಷವೆಂದರೆ ನ್ಯಾಯಾಲಯದ ಸಂಕೀರ್ಣದಲ್ಲೇ ಇದೇ ಮೊದಲ ಬಾರಿಗೆ ಬಂಧೀಖಾನೆಯನ್ನೂ ನಿರ್ಮಿಸಲಾಗಿದೆ.

ಪ್ರತಿ ಮಹಡಿಯಲ್ಲೂ ಬಂಧೀಖಾನೆ ಇದ್ದು, ಆರೋಪಿಗಳ ವಿಚಾರಣೆ ಮುಂದೂಡಿದರೆ ಅಲ್ಲೆ ಇರಲು ವ್ಯವಸ್ಥೆ ಮಾಡಲಾಗಿದೆ. ಕಕ್ಷೀದಾರರ ವಿಶ್ರಾಂತಿ ಕೊಠಡಿ, ವಿಚಾರಣಾದೀನ ಕೈದಿಗಳಿಗೆ ಪ್ರತ್ಯೇಕ ಕೊಠಡಿ, ವಕೀಲರ ಭವನ, ಸಭಾಭವನ, ಅಲ್ಲದೆ ಈ ಸಂಕೀರ್ಣದಲ್ಲಿ ಸುಪ್ರೀಂ ಹಾಗೂ ಹೈಕೋರ್ಟ್‍ಗಳಲ್ಲಿನ ನ್ಯಾಯಾಧೀಶರ ಕೊಠಡಿಗಳನ್ನು ವಿಶಾಲವಾಗಿ ನಿರ್ಮಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ವಿಡಿಯೋ ಕಾನ್ಪರೆನ್ಷ್ ಮೂಲಕ ವಿಚಾರಣೆ ನಡೆಯಲು ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ.

Facebook Comments

Sri Raghav

Admin