ನೊಬೆಲ್ ಪ್ರಶಸ್ತಿ ಪುರಸ್ಕೃತ ಖ್ಯಾತ ಲೇಖಕ ವಿ.ಎಸ್.ನೈಪಾಲ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

VS-Naipaul

ಲಂಡನ್, ಆ.12-ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಪುರಸ್ಕøತ ಲೇಖಕ ಮತ್ತು ಕಾದಂಬರಿಕಾರ ವಿ.ಎಸ್.ನೈಪಾಲ್ (85) ಇಂದು ಮುಂಜಾನೆ ಲಂಡನ್‍ನಲ್ಲಿ ನಿಧನರಾಗಿದ್ದಾರೆ. ಇವರು ಮಹಾ ಪ್ರತಿಭಾವಂತರಾಗಿದ್ದರು. ಇವರ ಬದುಕು ವಿಸ್ಮಯ ಸೃಜನಶೀಲತೆಯಿಂದ ಸಮದ್ಧವಾಗಿತ್ತು. ಕೊನೆಯುಸಿರೆಳೆಯುವ ಸಂದರ್ಭದಲ್ಲಿ ಅವರ ಸುತ್ತ ಕುಟುಂಬದ ಸದಸ್ಯರು, ಬಂಧು-ಹಿತೈಷಿಗಳಿದ್ದರು ಎಂದು ಅವರ ಪತ್ನಿ ಲೇಡಿ ನದೀರಾ ನೈಪಾಲ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ವಸಾಹತುಶಾಹಿ, ವಿಚಾರವಾದ, ಧರ್ಮ ಮತ್ತು ರಾಜಕಾರಣ ಕುರಿತ ಟೀಕೆ ಮತ್ತು ಕಟುವಾದ ವಿಮರ್ಶೆಗಳಿಂದ ಗುರುತಿಸಿಕೊಂಡಿದ್ದ ನೈಪಾಲ್ 30ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.  ದಿ ಮಿಸ್ಟಿಕ್ ಮಸ್ಸ್ಯೂರ್ ಅವರು ಬರೆದ ಮೊದಲ ಪುಸ್ತಕ. 1961ರಲ್ಲಿ ಪ್ರಕಟವಾದ ಎ. ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್ ಎಂಬ ಕಾದಂಬರಿ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಇದಲ್ಲದೇ ಅವರು ಫೀ ಸ್ಟೇಟ್(1971), ಗೆರಿಲ್ಲಾಸ್(1975), ಎ ಬೆಂಡ್ ಇನ್ ದಿ ರೀವರ್(1979), ಎ ವೇ ಇನ್ ದಿ ವಲ್ರ್ಡ್(1994), ದಿ ಮಿಮಿಕ್ ಮ್ಯಾನ್(1967), ದಿ ಎನಿಗ್ಮಾ ಆಫ್ ಅರೈವಲ್(1987), ಬಿಯಾಂಡ್ ಬಿಲೀಫ್ : ಇಸ್ಲಾಮಿಕ್ ಎಕ್ಸ್‍ಕರ್ಷನ್ಸ್ ಆಮಾಂಗ್ ದಿ ಕನ್‍ವರ್ಟೆಡ್ ಪೀಪಲ್ಸ್(1998), ಹಾಫ್ ಎ ಲೈಫ್(2001), ದಿ ರೈಟರ್ ಅಂಡ್ ದಿ ವಲ್ರ್ಡ್(2002), ಲೈಬ್ರರಿ ಅಕೇಷನ್ಸ್(2003), ದಿ ನೋವೆಲ್ ಮ್ಯಾಜಿಕ್ ಸೀಡ್ಸ್(2004), ದಿ ಮಾಸ್ಕ್ ಆಫ್ ಆಫ್ರಿಕಾ(2010) ಎಂಬ ಜನಪ್ರಿಯ ಕೃತಿಗಳನ್ನು ನೈಪಾಲ್ ರಚಿಸಿದ್ದಾರೆ.

ಮ್ಯಾನ್ ಬೂಕರ್ ಪ್ರಶಸ್ತಿ(1971), ಸಾಹಿತ್ಯ ಸೇವೆಗಾಗಿ ನೈಟ್‍ಹುಡ್ ಪ್ರಶಸ್ತಿ(1990) ಹಾಗೂ 2001ರಲ್ಲಿ ಸಾಹಿತ್ಯ ಕ್ಷೇತ್ರದ ಗಣನೀಯ ಸಾಧನೆಗಾಗಿ ಪ್ರತಿಷ್ಠತಿ ನೊಬೆಲೆ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಅವರಿಗೆ ಲಭಿಸಿವೆ.

Facebook Comments

Sri Raghav

Admin