ಲಾರ್ಡ್ಸ್ ಟೆಸ್ಟ್’ಗೆ 3ನೇ ವೇಗಿಯ ಕೊರತೆ ಎದ್ದು ಕಾಣುತ್ತಿದೆ : ಗಂಭೀರ್

ಈ ಸುದ್ದಿಯನ್ನು ಶೇರ್ ಮಾಡಿ

gambhir
ನವದೆಹಲಿ, ಆ.12- ಕ್ರಿಕೆಟ್ ಲೋಕದ ಸ್ವರ್ಗವೆಂದೇ ಬಿಂಬಿಸಿಕೊಂಡಿರುವ ಲಾರ್ಡ್ಸ್ ಟೆಸ್ಟ್ ‘ನಲ್ಲಿ ಭಾರತ ತಂಡಕ್ಕೆ 3ನೆ ವೇಗಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್‍ಗಳು ಮೇಲುಗೈ ಸಾಧಿಸಿದ್ದನ್ನೇ ಮಾನದಂಡ ಮಾಡಿಕೊಂಡು ಲಾರ್ಡ್ಸ್ ಟೆಸ್ಟ್’ನಲ್ಲಿ ಕುಲ್‍ದೀಪ್ ಯಾದವ್ ರನ್ನು ಹೆಚ್ಚುವರಿ ಸ್ಪಿನ್ನರ್ ಆಗಿ ತಂಡಕ್ಕೆ ಆಯ್ಕೆ ಮಾಡಿಕೊಂಡಿರುವುದು ವಿರಾಟ್ ಕೊಹ್ಲಿ ತಂಡದ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದ್ದಾರೆ ಎಂದರು.

ಭಾರತ ತಂಡವು ಕುಲ್‍ದೀಪ್ ಯಾದವ್‍ರ ಬದಲು ಉಮೇಶ್‍ಯಾದವ್‍ರನ್ನೇ ಆಡಿಸಿದ್ದರೆ ಇಂಗ್ಲೆಂಡ್‍ನ ರನ್ ದಾಹಕ್ಕೆ ಬ್ರೇಕ್ ಹಾಕಬಹುದಾಗಿತ್ತು ಎಂದು ನುಡಿದರು.  2ನೆ ಟೆಸ್ಟ್’ನಲ್ಲಿ ಸ್ಪಿನ್ನರ್‍ಗಳು ವಿಕೆಟ್ ಕೆಡವುವಲ್ಲಿ ಎಡವಿದ್ದರೆ , ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಇಶಾಂತ್‍ಶರ್ಮಾ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ ಎಂದು ಗಂಭೀರ್ ತಿಳಿಸಿದರು.

Facebook Comments

Sri Raghav

Admin