ವಾಟರ್ ಫಾಲ್ಸ್’ನಲ್ಲಿ ಮಿಂದೆದ್ದ ಮತ್ತಷ್ಟು ಕೂಲ್ ಆದ ಧೋನಿ

ಈ ಸುದ್ದಿಯನ್ನು ಶೇರ್ ಮಾಡಿ

Waterfalls

ರಾಂಚಿ,ಆ.12- ಸುದೀರ್ಘ ಕಾಲದ ಕ್ರಿಕೆಟ್ ಜೀವನದ ಮೈದಾನದಲ್ಲಿ ಸಾಕಷ್ಟು ಸಂತಸದ ಕ್ಷಣಗಳನ್ನು ಕಳೆದಿರುವ ಮಾಜಿ ನಾಯಕ ಮಹೇಂದ್ರಸಿಂಗ್ ಅವರು ಈಗ ಪುಟ್ಟ ಬಾಲಕನ ರೀತಿ ವಾಟರ್ ಫಾಲ್ಸ್ ಕೆಳಗೆ ನಿಂತು ಮಜ್ಜನ ಮಾಡುತ್ತಿರುವ ದೃಶ್ಯಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿದ್ದು, ಈಗ ವೈರಲ್ ಆಗಿದೆ.

ರಾಂಚಿನಲ್ಲಿ ಸುಮಾರು 3 ಪ್ರಸಿದ್ಧ ವಾಟರ್‍ಫಾಲ್ಸ್ ಇದ್ದು ಕಳೆದ 10 ವರ್ಷಗಳ ಹಿಂದೆ ನಾನು ಇಲ್ಲಿಗೆ ಬಂದಿದ್ದೆ, ನಂತರ ಕ್ರಿಕೆಟ್ ಜೀವನದಲ್ಲಿ ತುಂಬಾ ಬ್ಯುಜಿಯಾಗಿದ್ದರಿಂದ ಇಂತಹ ಸುಂದರ ಕ್ಷಣಗಳನ್ನು ಕಳೆದುಕೊಂಡಿದ್ದೆ.

ಕ್ರಿಕೆಟ್ ಜಂಜಾಟದಿಂದ ಈಗ ತುಸು ವಿಶ್ರಾಂತಿ ಸಿಗುತ್ತಿದ್ದು ನನ್ನ ಕುಟಂಬದೊಂದಿಗೆ ಜಾಲಿಮೂಡ್‍ನಲ್ಲಿದ್ದೇನೆ, ಹಾಗೆಯೇ ನಾನು ಬಾಲ್ಯದ ಜೀವನದಲ್ಲಿ ಕಳೆದುಕೊಂಡಿದ್ದ ಸುಂದರ ಕ್ಷಣಗಳನ್ನು ಮತ್ತೆ ಅನುಭವಿಸುತ್ತಿದ್ದೇನೆ. ರಾಂಚಿಯಲ್ಲಿ ತುಂಬಾ ಸುಂದರ ಜಾಲಪಾತಗಳಿವೆ, ಅವುಗಳ ಕೆಳಗೆ ನಿಂತು ಸ್ನಾನ ಮಾಡುವುದೇ ತುಂಬಾ ಸಂತಸದ ಕ್ಷಣವೆಂದು ಆ ಫೋಟೋ ಕೆಳಗೆ ಮಹೇಂದ್ರಸಿಂಗ್ ಧೋನಿ ಕೂಲ್ ಆಗಿ ಬರೆದಿದ್ದಾರೆ.

Facebook Comments

Sri Raghav

Admin