ಕೊಪ್ಪಳ ಜಿಲ್ಲೆಯಲ್ಲಿ ಪಂಪ್‍ಸೆಟ್‍ ವಿದ್ಯುತ್ ಶಾಕ್‍ಗೆ ಇಬ್ಬರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Pumpsent--01
ಕೊಪ್ಪಳ, ಆ.13- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯುತ್ ಶಾಕ್‍ನಿಂದ ಇಬ್ಬರು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲೆಬಗೇರಿ ಗ್ರಾಮದ ಮಂಜುನಾಥ್ ನಿಟ್ಟಲಿ (22) ಹಾಗೂ ಮಾದಿನೂರು ಗ್ರಾಮದ ಹುಲಿಗಪ್ಪ (40)ಮೃತ ದುರ್ದೈವಿಗಳು. ಮಂಜುನಾಥ್ ಮತ್ತು ಹುಲಿಗಪ್ಪ ತಮ್ಮ ಹೊಲಗಳಲ್ಲಿ ನೀರು ಹಾಯಿಸಲು ಪಂಪ್‍ಸೆಟ್‍ಗೆ ಚಾಲನೆ ನೀಡುವ ವೇಳೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin