ಬಿಹಾರದ ಗರೀಬ್‍ನಾಥ್ ದೇವಾಲಯದಲ್ಲಿ ಕಾಲ್ತುಳಿತ

ಈ ಸುದ್ದಿಯನ್ನು ಶೇರ್ ಮಾಡಿ

Bihar--01

ಮುಜಫರಪುರ,ಆ.13- ಇಲ್ಲಿನ ಗರೀಬ್‍ನಾಥ್ ದೇವಾಲಯದಲ್ಲಿ ನೂಕುನುಗ್ಗಲು ಉಂಟಾಗಿ ಸುಮಾರು 15 ಕನ್ವರಿಯಾಗಳು ಕಾಲ್ತುಳಿತದಿಂದ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ದೆಹಲಿಯಲ್ಲಿ ಈಚೆಗೆ ಕನ್ವರಿಯಾಗಳಿಂದ ನಡೆದಿದ್ದ ಹಿಂಸೆಗೆ ಸುಪ್ರೀಂ ಕೋರ್ಟ್ ಗಂಭೀರವಾಗಿತ್ತು. ಹಿಂಸೆ ಯಾವುದೇ ಧರ್ಮದವರಿಂದ ನಡೆದರೂ ಪೊಲೀಸ್ ವ್ಯವಸ್ಥೆ ಅದನ್ನು ನಿಯತ್ರಿಸಲೇ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಹಾಲಿ ಪ್ರಕರಣದಲ್ಲಿ ದೇಗುಲದೊಳಗೆ ನಡೆದಿರುವ ಕಾಲ್ತುಳಿತ ದುರ್ಘಟನೆಗೆ ಮೂಲ ಕಾರಣ ಏನೆಂಬುದು ಖಚಿತವಾಗಿ ತಿಳಿದು ಬಂದಿಲ್ಲ. ದೇವಳದೊಳಗಿನ ಭಕ್ತರ ನೂಕುನುಗ್ಗಲೇ ಕಾರಣವಿರಬಹುದಾದ ವ್ಯವಸ್ಥೆಯಲ್ಲಿನ ವೈಫಲ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ . ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಲತುಳಿತಕ್ಕೆ ಗುರಿಯಾದ ಕನ್ವರಿಯಾಗಳಿಗೆ ಚಿಕಿತ್ಸೆ ನೀಡಲಾಗತ್ತಿದೆ ಎಂದವರು ಹೇಳಿದ್ದಾರೆ.

Facebook Comments

Sri Raghav

Admin