ಏರೋ ಇಂಡಿಯಾ ಪ್ರದರ್ಶನ ಸ್ಥಳಾಂತರ ಮಾಡದಂತೆ ಪಾಲಿಕೆ ಸಭೆಯಲ್ಲಿ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

BBMP-Meeting
ಬೆಂಗಳೂರು, ಆ.13- ವೈಮಾನಿಕ ಪ್ರದರ್ಶನವನ್ನು ಸ್ಥಳಾಂತರಗೊಳಿಸದಂತೆ ಕೇಂದ್ರಕ್ಕೆ ಮನವಿ ಮಾಡಲು ಇಂದು ನಡೆದ ಬಿಬಿಎಂಪಿ ವಿಶೇಷ ಸಭೆಯಲ್ಲಿ ನಿರ್ಧರಿಸಲಾಗಿದೆ.  ಚುಕ್ಕೆ ಗುರುತಿನ ಪ್ರಶ್ನೆಗಳ ಮೇಲೆ ಚರ್ಚೆ ನಡೆಸಲು ಕರೆದಿದ್ದ ವಿಶೇಷ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮೇಯರ್ ಸಂಪತ್‍ರಾಜ್ ಅವರು, ಬೆಂಗಳೂರಿನಲ್ಲಿ ಏರ್‍ಶೋ ನಡೆಸುವಂತೆ ಕೇಂದ್ರಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿಯವರು ಪಾಲಿಕೆ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳುವುದು ಬೇಡ. ಕೇಂದ್ರ ಸರ್ಕಾರಕ್ಕೆ ಅವಮಾನ ಮಾಡಿದಂತಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ವೈಮಾನಿಕ ಪ್ರದರ್ಶನ ಬಿಬಿಎಂಪಿ ವ್ಯಾಪ್ತಿ ಯಲ್ಲಿ ನಡೆಯುತ್ತದೆ.  ಇದರಲ್ಲಿ ರಾಜಕೀಯ ಬೆರೆಸುವುದು ಬೇಡ. ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಮನವಿ ಮಾಡೋಣ ಎಂದು ಸಲಹೆ ಮಾಡಿದರು.

Facebook Comments

Sri Raghav

Admin