ಬರ್ತ್‍ಡೇಗಾಗಿ ಕೇಕ್ ಬಯಸುವ ಕಿಲಾಡಿ ಪಾಂಡಾಗಳು..!

ಈ ಸುದ್ದಿಯನ್ನು ಶೇರ್ ಮಾಡಿ

 

Ds

ಬರ್ತ್‍ಡೇ ಅಂದ ಕೂಡಲೇ ಥಟ್ಟನೆ ಕಣ್ಮುಂದೆ ಕೇಕ್ ನೆನಪಿಗೆ ಬರುತ್ತದೆ ಅಲ್ಲವೇ..? ಜನ್ಮದಿನದಂದು ಎಲ್ಲರೂ ಕೇಕ್ ಕತ್ತರಿಸಿ ಅವುಗಳನ್ನು ಮನೆಮಂದಿಗೆ,. ಬಂಧು-ಮಿತ್ರರಿಗೆ ಹಂಚಿ ತಿನ್ನುವುದು ಸಾಮಾನ್ಯ. ಆದರೆ ಸದಾ ಬಿದಿರು ತಿನ್ನುವ ಪಾಂಡಾಗಳೂ ಕೂಡ ತಮ್ಮ ಹುಟ್ಟುಹಬ್ಬಕ್ಕಾಗಿ ಕೇಕ್ ಬಯಸುತ್ತವೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ..!

Ds-1

ಜರ್ಮನಿಯ ಬರ್ಲಿನ್ ಮೃಗಾಲಯದಲ್ಲಿ ಜಿಯಾವೋ ಕ್ವಿಂಗ್ ಎಂಬ ಗಂಡು ಪಾಂಡಾ ತನ್ನ ಎಂಟನೇ ವರ್ಷದ ಜನ್ಮದಿನವನ್ನು ಆಚರಿಸಿ ಕೊಂಡಿತು. ಇದೇ ಸಂದರ್ಭದಲ್ಲಿ ಮೆಂಗ್ ಮೆಂಗ್ ಎಂಬ ಹೆಣ್ಣು ಪಾಂಡಾಗೂ ಐದನೆ ವರ್ಷದ ಬರ್ತ್ ಡೇ ಸಡಗರ. ಪಾಂಡಾಗಳಿಗೆ ಸಾಮಾನ್ಯವಾಗಿ ಬಿದಿರು ಅತ್ಯಂತ ಪ್ರಿಯವಾದ ಆಹಾರ. ಆದರೆ ಈ ಎರಡು ಪಾಂಡಾಗಳು ತಮ್ಮ ಜನ್ಮದಿನ ದಂದು ಬಿದಿರು ಕೋಲಿಗೆ ಬ್ರೇಕ್ ನೀಡಿ ಫ್ರೂಟ್ ಐಸ್ ಕೇಕ್‍ಗಳನ್ನು ತಿಂದು ಗಮನಸೆಳೆದವು.
ಈ ಎರಡೂ ಪಾಂಡಾಗಳು ಈಗ ಬರ್ಲಿನ್ ಮೃಗಾಲಯದ ಸ್ಟಾರ್ ಅಟ್ರಾಕ್ಷನ್. ಚೀನಾದಿಂದ ಇವುಗಳನ್ನು ಬರ್ಲಿನ್‍ಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಜರ್ಮನ್ ಚಾನ್ಸುಲರ್ ಹಾಗೂ ಚೀನಾ ಅಧ್ಯಕ್ಷ ಹಾಗೂ ಅನೇಕ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದರು.

ಏಷ್ಯಾದ ಅದರಲ್ಲೂ ಚೀನಾದ ಪರಿಸರಕ್ಕೆ ಹೊಂದಿ ಕೊಂಡಿರುವ ಈ ಎರಡು ಪಾಂಡಾಗಳಿಗೆ ಯೂರೋಪ್ ವಾತಾವರಣ ಹೊಸದು. ಇಲ್ಲಿ ಹೊಂದಿಕೊಳ್ಳಲು ಕೆಲವು ಸಮಯ ಬೇಕು. ಹಾಗೆಯೇ ಬರ್ಲಿನ್‍ನ ಬಿಸ್ಪೋಕ್ ಪಾಂಡಾ ಗಾರ್ಡನ್‍ನಲ್ಲಿ ಇವೆರಡು ಮಿಲನಮಹೋತ್ಸವ ಆಚರಿಸಲು ಸೂಕ್ತ ವಾತಾವರಣವನ್ನೂ ಸಜ್ಜುಗೊಳಿಸಲಾಗುತ್ತಿದೆ.  ಈ ಹಿಂದೆ ಬರ್ಲಿನ್‍ನಲ್ಲಿ ಪಾಂಡಾಗಳ ಸಂತಾನೋತ್ಪತ್ತಿಗೆ ನಡೆಸಲಾದ ಪ್ರಯತ್ನಗಳು ನಿರೀಕ್ಷಿತ ಫಲ ನೀಡಲಿಲ್ಲ. ಇಲ್ಲಿನ ಬಾವೋ ಬಾವೋ ಎಂಬ ಹಳೆ ಗಂಡು ಪಾಂಡಾ ಮೃತಪಟ್ಟಿತು. ಈಗ ಜಿಯಾವೋ ಕ್ವಿಂಗ್ ಮತ್ತು ಮೆಂಗ್ ಮೆಂಗ್ ಒಗ್ಗೂಡಿ ಸಂತಾನ ವೃದ್ದಿ ಮಾಡುವ ಆಶಾಭಾವನೆ ಮನೆ ಮಾಡಿದೆ.

Facebook Comments

Sri Raghav

Admin