ಬಿಟ್ಟಿ ಸಿಕ್ತು ಅಂತ ವೈಫೈ ಬಳಸೋ ಮುನ್ನ ಹುಷಾರಾಗಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

Wife---Free

ತಂತ್ರಜ್ಞಾನ ಬೆಳೆದಷ್ಟು ಸಮಸ್ಯೆಗಳು ಜೊತೆಜೊತೆಗೆ ಬೆಳೆಯುತ್ತಿವೆ ಇದಕ್ಕೆ ತಾಜಾ ಉದಾಹರಣೆಯೆಂದರೆ ವೈಫೈ, ಹೌದು, ನಮ್ಮ ಜನ ಫ್ರೀಯಾಗಿ ಏನಾದ್ರೂ ಸಿಗುತ್ತೆ ಅಂದರೆ ನಿದ್ದೆಗೆಟ್ಟು ಸಾಲಲ್ಲಿ ನಿಲ್ತಾರೆ, ಅದರಲ್ಲೂ ಫ್ರೀ ವೈಫೈ ಸಿಕ್ರೆ ಕೇಳಬೇಕಾ? ಅವತ್ತು ಹಬ್ಬಾನೇ, ಬೆಕಾಗಿರೋದು, ಬೇಡವಾಗಿರೋದು ಎಲ್ಲವನ್ನು ಡೌನ್ಲೋಡ್ ಮಾಡಿ ಸೇವ್ ಮಾಡಿ ಇಟ್ಕೋತಾರೆ. ಆದರೆ ಬಿಟ್ಟಿ ವೈಫೈ ಸಿಗುತ್ತೆ ಅಂತ ಕನೆಕ್ಟ್ ಮಾಡಿಕೊಡು ಬಳಸೋ ಮೊದಲು ಹುಷಾರಾಗಿರಿ ಯಾಮಾರಿದ್ರೆ ಆಮೇಲೆ ಬಾಯಿ ಬಾಯಿ ಬಡ್ಕೋಬೇಕಾಗುತ್ತೆ.

ಹೌದು, ಇತ್ತೀಚಿಗೆ ಎಲ್ಲರೊ ಇಂಟರ್ನೆಟ್ ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಊಟ ಇಲ್ಲದಿದ್ರೂ ಪರ್ವಾಗಿಲ್ಲ ಇಂಟರ್ನೆಟ್ ಇದ್ರೆ ಸಾಕು ಅನ್ನೋ ಸ್ಥಿತಿ ಉದ್ಭವವಾಗಿದೆ. ಇದಕ್ಕೆ ಪೂರಕವಾಗಿ ಏರ್‌ಪೋರ್ಟ್..ರೈಲ್ವೆ ಸ್ಟೇಷನ್, ಬಸ್ಟಾಂಡ್, ಲಾಡ್ಜಿಂಗ್..ಹೀಗೆ ಎಲ್ಲಿಗೇ ಹೋದರೂ ಕೂಡಲೆ ಫ್ರೀ ವೈಫೈ ಬೇರೆ. ಫ್ರೀ ವೈಫೈ ಉಪಯೋಗಿಸುವಾಗ ಸ್ವಲ್ಪ ಎಚ್ಚರಿಕೆಯಿಡಿರುವುದು ಉತ್ತಮ ಏಕೆಂದರೆ ನಿಮ್ಮ ಮೊಬೈಲ್ ನಲ್ಲಿ ನೀವು ಫ್ರೀ ವೈಫೈ ಬಳಸುವಾಗಿ ನಿಮ್ಮ ಬ್ಯಾಂಕ್ ಅಕೌಂಟ್ , ಫೇಸ್ಬುಕ್ ಅಕೌಂಟ್ , ಇತರೆ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳನ್ನೂ ಹ್ಯಾಕ್ ಮಾಡಿ ಮಾಹಿತಿ ಕಡಿಯಲಾಗುತ್ತೆ ಎಂಬ ವರದಿಗಳಿವೆ.

ಆದಷ್ಟು ಸೇಫ್ ಆಗಿ ಫ್ರೀ ವೈಫೈ ಉಪಯೋಗಿಸುವಾಗ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಅಪ್‌ಡೇಟೆಡ್ ಔS ಬಳಸುವುದು ಉತ್ತಮ. ಇದರಿಂದ ಡಿವೈಸ್ ಹೆಚ್ಚು ಸುರಕ್ಷಿತವಾಗಿ ಇರುತ್ತದೆ. ಆಂಟಿ ವೈರಸ್ ಟೂಲ್‌ಗಳನ್ನು ಬಳಸಿ, ನಗದು ವಹಿವಾಟು, ಪಾಸ್‌ವರ್ಡ್ ಎಂಟರ್ ಮಾಡುವ ಕೆಲಸಗಳನ್ನು ಮಾಡಬೇಡಿ, ಲೇಟೆಸ್ಟ್ ಮೊಬೈಲ್ಸ್‌ನಲ್ಲಿ ಟೂ ಫ್ಯಾಕ್ಟರ್ ಸೆಕ್ಯುರಿಟಿ ಇರುತ್ತದೆ. ಅದನ್ನು ಆನ್ ಮಾಡಿಕೊಳ್ಳಿ, ಕೆಲಸ ಮುಗಿದ ಕೂಡಲೆ ವೈಫೈ ಆಫ್ ಮಾಡಿ, ವಿಪಿನ್ ಮೂಲಕ ಉಚಿತ ವೈಫೈ ಬಳಸುವುದು ಉತ್ತಮ.

ಇನ್ನೊಂದು ಸಮೀಕ್ಷೆಯಂತೆ ಯಾರು? ಎಲ್ಲಿ..? ಎಷ್ಟು ಫ್ರೀ ವೈಫೈ ಬಳಸುತ್ತಾರೆ..? ಹೇಗೆ ಬಳಸುತ್ತಾರೆ ಎಂಬುದು ಒಂದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಎಡಿಟ್ ಮಾಡಲು ಅನ್ನುಮತಿ ಕೊಡುವವರು ಶೇ.19 ರಷ್ಟು ಮಂದಿ, ಪಬ್ಲಿಕ್ ವೈಫೈ ಮೂಲಕ ಬ್ಯಾಂಕ್ ಖಾತೆಗಳನ್ನು ನೋಡಿಕೊಳ್ಳುವುದು, ಫೋಟೋಗಳನ್ನು ಷೇರ್ ಮಾಡಿಕೊಳ್ಳುವವರು ಶೇ.96 ರಷ್ಟು, ಪಬ್ಲಿಕ್ ವೈಫೈ ಬಳಸಿದರೂ ತಮ್ಮ ಮಾಹಿತಿಯಿಂದ ನಷ್ಟವೇನು ಇಲ್ಲ ಎಂದುಕೊಳ್ಳುವ ಭಾರತೀಯರು ಶೇ.74 ರಷ್ಟು, ಹೊಸ ಸ್ಥಳಕ್ಕೆ ಹೋದರೆ ವೈಫೈನಲ್ಲಿ ಪ್ರವೇಶಿಸಲು ಮಿನಿಮಮ್ ಒಂದು ನಿಮಿಷವೂ ನಿಲ್ಲದವರು ಶೇ.51 ರಷ್ಟು, ವೈಯಕ್ತಿಕ ಇ-ಮೇಲ್, ಕಾಂಟ್ಯಾಕ್ಟ್ಸ್ ಮಾಹಿತಿ ಕೊಡಲು ಸಿದ್ಧವಾಗಿರುವವರು ಶೇ.19ರಷ್ಟು, ವೈಫೈನೊಂದಿಗೆ ಹೋಲಿಸಿದರೆ ಸುರಕ್ಷಿತವಾದ ವರ್ಚುಯಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಬಳಸುವವರು ಶೇ.48ರಷ್ಟು, ಪಬ್ಲಿಕ್ ವೈಫೈನೊಂದಿಗೆ ಅಶ್ಲೀಲ ಚಿತ್ರಗಳು, ವಿಡಿಯೋಗಳನ್ನು ನೋಡುವವರು ಶೇ.31 ರಷ್ಟು, ಪಬ್ಲಿಕ್ ವೈಫೈ ನೆಟ್‌‍ವರ್ಕ್ ಬಳಸುವಾಗ ಬಹಳಷ್ಟು ಎಚ್ಚರದಿಂದ ವ್ಯವಹರಿಸಬೇಕು ಇಲ್ಲದಿದ್ದರೆ ನಮ್ಮ ವೈಯಕ್ತಿಕ ಮಾಹಿತಿ, ಫೋಟೋಗಳು, ವಿಡಿಯೋಗಳು ಇತರರ ಕೈಗೆ ಸಿಕ್ಕಿದರೆ ಕಷ್ಟಗಳನ್ನು ಕೊಂಡು ಕೊಂಡಂತಾಗುತ್ತದೆ ಎನ್ನುತ್ತೆ ಸಮೀಕ್ಷೆಯೊಂದು.

Facebook Comments

Sri Raghav

Admin