ನೀವು ಹಾರುವ ಮಾನವರಾಗ ಬೇಕೇ..?

ಈ ಸುದ್ದಿಯನ್ನು ಶೇರ್ ಮಾಡಿ

DS
ನೀವು ಹಾರುವ ಮಾನವರಾಗ ಬೇಕೇ..? ಹಾಗಾದರೆ ನಿಮಗೆ ಇದು ಈಗ ಸಾಧ್ಯವಾಗಲಿದೆ. ಬ್ರಿಟಿಷ್ ವ್ಯಕ್ತಿಯೊಬ್ಬ ಸೃಷ್ಟಿಸಿರುವ ಜೆಟ್ ಸೂಟ್ ಧರಿಸಿದರೆ ನೀವು ಐರನ್ ಮ್ಯಾನ್ ರೀತಿ ಹಾರಬಹುದು. ಹೌದು..! ಲಂಡನ್‍ನ ಡಿಪಾರ್ಟ್‍ಮೆಂಟ್ ಸ್ಟೋರ್‍ನಲ್ಲಿ ಈ ಜೆಟ್ ಸೂಟ್ ಲಭ್ಯ. ಇದರ ಬೆಲೆ 3,40,000 ಪೌಂಡ್‍ಗಳು..!
ಪಕ್ಷಿಗಳಂತೆ ಹಾರಬೇಕೆಂಬ ಕನಸನ್ನು ವಿಮಾನ ಸೃಷ್ಟಿಸುವ ಮೂಲಕ ರೈಟ್ ಬದ್ರರ್ಸ್ ಸಾಕಾರಗೊಳಿಸಿದರು. ರೆಕ್ಕೆಗಳಿಲ್ಲದೇ ಮಾನವ ಹಾರಾಡಲು ಸಾಧ್ಯವಾಗುವಂಥ ಹೊಸ ಹೊಸ ಪ್ರಯೋಗಗಳು ಈ ಜಗತ್ತಿನಲ್ಲಿ ಇಂದಿಗೂ ನಡೆಯುತ್ತಲೇ ಇವೆ. ಬ್ರಿಟಿಷ್ ಮಾಜಿ ವರ್ತಕ ರಿಚರ್ಡ್ ಬ್ರೌನ್‍ನಿಂಗ್ ಸೃಷ್ಟಿಸಿರುವ ಜೆಟ್ ಸೂಟ್ ಈಗ ಜಗತ್ತಿನ ಗಮನ ಸೆಳೆಯುತ್ತಿದೆ.

DS-1

ಐದು ಪಟ್ಟ ಜೆಟ್ ಎಂಜಿನ್‍ಗಳು ಮತ್ತು ಕೃತಕ ಕೈಗಳ ಈ ವಸ್ತ್ರವನ್ನು ಧರಿಸಿದರೆ ನೀವು ಹಾರಬಹುದು. ಇದರಲ್ಲಿ ಎಲೆಕ್ಟ್ರಾನಿಕ್ಸ್ ಸಾಧನಗಳು ಮತ್ತು 3-ಡಿ ಪ್ರಿಂಟೆಂಡ್ ಬಿಡಿ ಭಾಗಗಳಿವೆ. ಸೂಪರ್‍ಹೀರೋ-ಐರನ್ ಮ್ಯಾನ್ ಆಗಿ ರಾಬರ್ಟ್ ಡೌವ್ನಿ ಜ್ಯೂನಿಯರ್ ಧರಿಸಿದ ವಸ್ತ್ರವನ್ನು ಇದು ಬಹುತೇಕ ಹೋಲುತ್ತದೆ.
ಜೆಟ್ ಇಂಧನ ಅಥವಾ ಡೀಸೆಲ್‍ನಿಂದ ಇದು ಚಲಿಸಬಲ್ಲದು. ಗಂಟೆಗೆ 51 ಕಿಲೋ ಮೀಟರ್ ವೇಗದಲ್ಲಿ ಹಾಗೂ 12,000 ಅಡಿಗಳಷ್ಟು ಎತ್ತರದಲ್ಲಿ ಚಲಿಸುವ ಸಾಮಥ್ರ್ಯ ಹೊಂದಿದೆ. ಇದರ ಸಂಶೋಧಕ ರಿಚರ್ಡ್ ಸುರಕ್ಷತೆ ಕಾರಣಗಳಿಗಾಗಿ ನೆಲದಿಂದ ಕೆಲವು ಅಡಿಗಳಷ್ಟು ಎತ್ತರಕ್ಕೆ ಮಾತ್ರ ಹಾರಿ ಜೆಟ್ ಸೂಟ್ ಸಾಮಥ್ರ್ಯ ಪ್ರದರ್ಶಿಸಿದರು.

ಲಂಡನ್‍ನ ಸೆಲ್‍ಫ್ರಿಡ್ಜ್ ಲಕ್ಸುರಿ ಡಿಪಾರ್ಟ್‍ಮೆಂಟ್ ಸ್ಟೋರ್ ಸಮೀಪದ ಬೀದಿಯಲ್ಲಿ ಇದರ ಹಾರಾಟ ಪ್ರದರ್ಶನ ನಡೆಸಲಾಯಿತು.  ಇದನ್ನು ಧರಿಸಿದರೆ, ಒಂದು ನಿಮಿಷಕ್ಕೆ ನಾಲ್ಕು ಮೈಲಿ ದೂರ ಚಲಿಸಬಹುದು. ಈ ಜೆಟ್ ಸೂಟ್‍ನನ್ನು ಮತ್ತಷ್ಟು ಸುಧಾರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಇದರ ಅನ್ವೇಷಕ ರಿಚರ್ಡ್.
ಈ ಜೆಟ್ ಸೂಟ್ ಬೆಲೆ 3,40,000 ಪೌಂಡ್‍ಗಳು ಅಂದರೆ 4,43,428 ಡಾಲರ್‍ಗಳು. ಡಿಪಾರ್ಟ್ ಮೆಂಟ್ ಸ್ಟೋರ್‍ನಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ. ಈ ಸೂಟ್ ಕೊಂಡವರಿಗೆ ಹಾರಾಟದ ಬಗ್ಗೆ ಉಚಿತ ತರಬೇತಿ ಸಹ ನೀಡಲಾಗುತ್ತದೆ.

Facebook Comments

Sri Raghav

Admin