ರಾಹುಲ್‍ಗೆ ಕೆಪಿಸಿಸಿ ನೀಡಿದ ಸ್ಪೆಷಲ್ ಗಿಫ್ಟ್ ಏನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Rahul-Gift--01

ಬೀದರ್,ಆ.13- ಎಐಸಿಸಿ ಅದ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪ್ರಚಾರಕ್ಕೆ ಮುಂದಾಗಿರುವ ರಾಹುಲ್ ಗಾಂಧಿಗೆ ಕೆಪಿಸಿಸಿ ವಿಶೇಷ ನೆನಪಿನ ಕಾಣಿಕೆ ನೀಡಲು ಮುಂದಾಗಿದೆ.   ಜನಧ್ವನಿ ಹಾಗೂ ಕೆಪಿಸಿಸಿ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾವೇಶದ ಹಿನ್ನೆಲೆಯಲ್ಲಿ ಬೀದರ್‍ಗೆ ಆಗಮಿಸಲಿರುವ ರಾಹುಲ್ ಗಾಂಧಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಸ್ಥಾವರ ಲಿಂಗವನ್ನು ಕೊಡುಗೆಯಾಗಿ ನೀಡಲಿದ್ದಾರಂತೆ.

ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಡೆದಾಗ ಅದನ್ನು ಖಂಡ್ರೆ ವಿರೋಧಿಸಿದ್ದರು. ಅಲ್ಲದೇ ಅವರು ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಹೇಳಿದ್ದರು. ಈಗಲೂ ಅದನ್ನೇ ಸಾರುವ ನಿಟ್ಟಿನಲ್ಲಿ ಈಶ್ವರ್ ಖಂಡ್ರೆ, ರಾಹುಲ್ ಗಾಂಧಿಗೆ ಸ್ಥಾವರ ಲಿಂಗ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin