ಬ್ಲೂ ಫಿಲ್ಮ್ ತೋರಿಸಿ ಹಾಸ್ಟೆಲ್ ಯುವತಿಯರ ರೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

Blue-Film--01
ಭೋಪಾಲ್ (ಪಿಟಿಐ), ಆ.13- ಬಿಹಾರ ಮತ್ತು ಉತ್ತರಪ್ರದೇಶದ ಬಾಲಿಕಾಗೃಹಗಳಲ್ಲಿ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಪ್ರಕರಣಗಳಿಂದ ದೇಶದ ಜನತೆ ಬೆಚ್ಚಿ ಬಿದ್ದಿರುವಾಗಲೇ, ಮಧ್ಯಪ್ರದೇಶದ ಭೋಪಾಲ್‍ನ ಹಾಸ್ಟೆಲ್ ಒಂದರಲ್ಲಿ ನಡೆದ ಮತ್ತೊಂದು ಲೈಂಗಿಕ ಶೋಷಣೆಯ ಕರ್ಮಕಾಂಡ ಬೆಳಕಿಗೆ ಬಂದಿದೆ.

ಭೋಪಾಲ್‍ನ ಖಾಸಗಿ ವಸತಿನಿಲಯದ ಯುವತಿಯರನ್ನು ಅಕ್ರಮ ಬಂಧನದಲ್ಲಿಟ್ಟು ಬಲವಂತವಾಗಿ ಬ್ಲೂ ಫಿಲಂ ಗಳನ್ನು ತೋರಿಸಿ ಆರು ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗುತ್ತಿರುವ ಆತಂಕಕಾರಿ ಪ್ರಕರಣ ಬಯಲಾಗಿದೆ. ಈ ಸಂಬಂಧ ಹಾಸ್ಟೆಲ್ ನಿರ್ದೇಶಕ ಅಶ್ವಿನ್ ಶರ್ಮ ಎಂಬಾತನನ್ನು ಪೆÇಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಹಾಸ್ಟೆಲ್‍ನಲ್ಲಿ ನಡೆಯುತ್ತಿದ್ದ ಲೈಂಗಿಕ ಶೋಷಣೆ, ಅತ್ಯಾಚಾರ ಮತ್ತು ಪ್ರಾಣ ಬೆದರಿಕೆಗಳ ಕರ್ಮಕಾಂಡಗಳ ಬಗ್ಗೆ ನಾಲ್ವರು ಸಂತ್ರಸ್ತ ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಕಳೆದ ವಾರ ಇದೇ ಹಾಸ್ಟೆಲ್‍ನ ವಾಕ್ ಮತ್ತು ಶ್ರವಣ ದೋಷವಿರುವ 20 ವರ್ಷದ ಯುವತಿಯ ಮೇಲೆ ನಿರ್ದೇಶಕ ಅತ್ಯಾಚಾರ ಎಸಗಿದ್ದ ಬಗ್ಗೆ ದೂರು ದಾಖಲಾದ ನಂತರ ಇಲ್ಲಿನ ಭೀಕರ ಕೃತ್ಯಗಳು ಬೆಳಕಿಗೆ ಬಂತು. ಅದಾದ ನಂತರ, ಇನ್ನೂ ಮೂವರು ಯುವತಿಯರು ವಸತಿನಿಲಯದಲ್ಲಿ ನಡೆಯುತ್ತಿದ್ದ ಕರ್ಮಕಾಂಡಗಳನ್ನು ವಿವರಿಸಿ ಪೊಲೀಸರಿಗೆ ದೂರು ನೀಡಿದರು.

ಈ ದೂರುಗಳನ್ನು ಆಧರಿಸಿ ನಿರ್ದೇಶಕ ಅಶ್ವಿನ್ ಶರ್ಮನನ್ನು ಬಂಧಿಸಿದ್ದಾರೆ. ಈತ ಯುವತಿಯರನ್ನು ಅಕ್ರಮ ಬಂಧನದಲ್ಲಿಟ್ಟು, ಅವರಿಗೆ ಅಶ್ಲೀಲ ಸಿನಿಮಾಗಳನ್ನು ಬಲವಂತವಾಗಿ ತೋರಿಸಿ ಆರು ತಿಂಗಳಿನಿಂದ ಅವರನ್ನು ತನ್ನ ಕಾಮ ತೃಷೆಗೆ ಬಳಸಿಕೊಂಡಿದ್ದ. ಅಲ್ಲದೇ ಈ ವಿಷಯವನ್ನು ಹೊರಗೆ ತಿಳಿಸದಂತೆ ಪ್ರಾಣ ಬೆದರಿಕೆ ಹಾಕಿದ್ದ. ಈತನ ವಿರುದ್ಧ ಅಕ್ರಮ ಬಂಧನ, ಅತ್ಯಾಚಾರ, ಬೆದರಿಕೆ, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಭೋಪಾಲ್‍ನ ಹಿರಿಯ ಪೊಲೀಸ್ ಅಧಿಕಾರಿ ಧರ್ಮೇಂದ್ರ ಚೌಧರಿ ತಿಳಿಸಿದ್ದಾರೆ.

ಈತ ಪ್ರಭಾವಶಾಲಿಯಾಗಿದ್ದು, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ನಿಕಟ ನಂಟು ಹೊಂದಿದ್ಧಾನೆ ಎಂದು ಭೋಪಾಲ್ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಆದರೆ ಈ ಆರೋಪಿವನ್ನು ಬಿಜೆಪಿ ತಳ್ಳಿ ಹಾಕಿದೆ. ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್, ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

Facebook Comments

Sri Raghav

Admin