ತಿಂಗಳಾಂತ್ಯಕ್ಕೆ ಹೊಸ ಜಾಹಿರಾತು ನೀತಿ

ಈ ಸುದ್ದಿಯನ್ನು ಶೇರ್ ಮಾಡಿ

High-Court-BBMP

ಬೆಂಗಳೂರು, ಆ.13- ಹೈಕೋರ್ಟ್ ಬೀಸಿದ ಚಾಟಿಗೆ ಬಿಬಿಎಂಪಿ ಬೆಚ್ಚಿಬಿದ್ದಿದೆ..! ಇದೇ ಆಗಸ್ಟ್ 31ರೊಳಗೆ ನೂತನ ಜಾಹೀರಾತು ನೀತಿ ರೂಪಿಸಲು ಮುಂದಾಗಿದೆ. ಚುಕ್ಕೆ ಗುರುತಿನ ಪ್ರಶ್ನೆಗಳ ಮೇಲೆ ಚರ್ಚೆ ನಡೆಸಲು ಕರೆದಿದ್ದ ಬಿಬಿಎಂಪಿ ವಿಶೇಷ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕಾನೂನು ಘಟಕದ ಮುಖ್ಯಸ್ಥ ದೇಶಪಾಂಡೆ ಅವರು ಮಾತನಾಡಿ, ನ್ಯಾಯಾಲಯದ ನಿರ್ದೇಶನದಂತೆ ಆ.31ರೊಳಗೆ ಜಾಹೀರಾತು ನೀತಿ ರೂಪಿಸಿ ಜಾರಿಗೊಳಿಸಬೇಕಾಗಿದೆ ಎಂದರು.

ಜಾಹೀರಾತು ಪ್ರಕರಣ ಸಂಬಂಧ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಬಿಬಿಎಂಪಿ ಸಭೆಯಲ್ಲಿ ಮಾತುಕತೆ ನಡೆಸುವುದು ಸಮಂಜಸವೇ ಎಂಬ ಬಗ್ಗೆಯೂ ಕೂಡ ಚರ್ಚೆಯಾಯಿತು. ಒಂದು ವರ್ಷ ಕಾಲ ಫ್ಲೆಕ್ಸ್, ಬ್ಯಾನರ್‍ಗಳನ್ನು ನಗರಾದ್ಯಂತ ನಿಷೇಧಿಸಲಾಗಿದೆ. ಪ್ರಕರಣ ಸಂಬಂಧ 465 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.

ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದ್ದು, ಜಾಹೀರಾತು ನೀತಿ ರಚನೆ ಬಗ್ಗೆ ಅಧಿಕಾರಿಗಳೊಂದಿಗೆ ಇಂದು ಸಭೆ ಕರೆದಿದ್ದೇವೆ ಎಂದು ವಿವರ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್‍ರಾಜ್ ಅವರು, ಈ ಬಗ್ಗೆ ಹೆಚ್ಚು ಚರ್ಚಿಸುವುದು ಬೇಡ. ಹೈಕೋರ್ಟ್ ಆದೇಶದಂತೆ ಜಾಹೀರಾತು ನೀತಿ ಜಾರಿಗೊಳಿಸಿ ಎಂದು ನಿರ್ದೇಶನ ನೀಡಿದರು.

Facebook Comments

Sri Raghav

Admin