ಸ್ವಾತಂತ್ರ್ಯೋತ್ಸವ ನಿಮಿತ್ತ ಪಾಕ್ ಜೈಲಲ್ಲಿರುವ 30 ಭಾರತೀಯ ಕೈದಿಗಳ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Jail--01

ಇಸ್ಲಾಮಾಬಾದ್,ಆ.13- ಸ್ವಾತಂತ್ರ್ಯೋತ್ಸವ ದಿನಾಚರಣೆ ನಿಮಿತ್ತ ಹಾಗೂ ಮಾನವೀಯತೆ ಆಧಾರದ ಮೇಲೆ 30 ಭಾರತೀಯ ಕೈದಿಗಳನ್ನ ಆ.14 ರಂದು ಬಿಡುಗಡೆ ಮಾಡಲು ಪಾಕ್ ನಿರ್ಧರಿಸಿದೆ. 30 ಕೈದಿಗಳ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದ್ದು, ಈ ಪೈಕಿ 27 ಮೀನುಗಾರಾಗಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.  ಇನ್ನು ಇದೇ ಜನವರಿಯಲ್ಲಿ ಇಸ್ಲಾಮಾಬಾದ್ 147 ಮೀನುಗಾರರನ್ನು ಮಾನವೀಯತೆ ನೆಲೆ ಮೇಲೆ ಬಿಡುಗಡೆ ಮಾಡಿದನ್ನು ಇಲ್ಲಿ ಸ್ಮರಿಸಬಹುದು.

Facebook Comments

Sri Raghav

Admin