ಸ್ವಂತ ಪಕ್ಷದದೊಂದಿಗೆ ಉಪ್ಪಿ ರಾಜಕೀಯಕ್ಕೆ ರೀಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

Upendra--01
ಬೆಂಗಳೂರು,ಆ.13- ಪ್ರಜಾಕೀಯ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಲು ಮುಂದಾಗಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರು ಕಾರಣಾಂತರಗಳಿಂದ ಪಕ್ಷ ಬಿಟ್ಟು ಇದೀಗ ಮತ್ತೆ ತಮ್ಮದೇ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಉಪೇಂದ್ರ ಕಳೆದ ವಿಧಾನಸಭಾ ಚುನಾವಣೆ ಮುನ್ನಾ ಕರ್ನಾಟಕ ಪ್ರಜಾಕೀಯ ಪಕ್ಷದ(ಕೆಪಿಜೆಪಿ) ಮೂಲಕ ರಾಜ್ಯ ರಾಜಕಾರಣಕ್ಕೆ ಧುಮುಕಿದ್ದರು. ಪಕ್ಷದ ಅಧ್ಯಕ್ಷರ ನಡುವೆ ಉಂಟಾದ ಭಿನ್ನಾಭಿಪ್ರಾಯಗಳಿಂದ ಪಕ್ಷದಿಂದ ದೂರ ಸರಿದಿದ್ದರು.

ಇದೀಗ ತಮ್ಮ ಸ್ವಂತ ಪಕ್ಷದ ಘೋಷಣೆಗೆ ಮುಹೂರ್ತ ನಿಗದಿ ಮಾಡಿದ್ದು, ಸೆ.18ರಂದು ತಮ್ಮ ಪಕ್ಷದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ. ಉತ್ತಮ ಪ್ರಜಾಕೀಯದ ಮೂಲಕ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಉತ್ತಮ ಪ್ರಜಾಕೀಯ ಪಕ್ಷ ಸ್ಪರ್ಧೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಉಪೇಂದ್ರ ಆದಷ್ಟು ಬೇಗ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin