ಅತ್ತಿದ್ದಕ್ಕೆ ನೀರಿನಲ್ಲಿ ಮುಳುಗಿಸಿ ಮಗು ಕೊಂದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Baby--01

ಮುಂಬೈ,ಆ.13- ತಾಯಿಯೊಬ್ಬಳು ತನ್ನ ಆರು ತಿಂಗಳ ಹಸುಗೂಸನ್ನೇ ನೀರಿನಲ್ಲಿ ಮುಳುಗಿಸಿ ಕೊಂದಿರುವ ಘಟನೆ ನಡೆದಿದೆ. ಭಿವಂಡಿ ತಾಲೂಕಿನ ಕವಾಡ ಪಂಚಾಯ್ತಿ ವ್ಯಾಪ್ತಿಯ ಛಾಪಶಿಪಾಡಿಯಲ್ಲಿ ಈ ಘಟನೆ ನಡೆದಿದ್ದು, ಅದಿವಾಸಿ ಜನಾಂಗದ ಕಲ್ಪನಾ ಗಾಯಕರ್ (25) ಮಗುವನ್ನು ಕೊಂದ ತಾಯಿ.  ಮಗು ಹುಟ್ಟಿದಾಗಿನಿಂದಲೂ ಅನಾರೋಗ್ಯದಿಂದ ಕೂಡಿದ್ದು, ನಿರಂತರವಾಗಿ ಅಳುತ್ತಿತ್ತು. ಮಗುವಿನ ಅಳು ಶಬ್ದ ಕೇಳಲಾರದೇ ತಾಳ್ಮೆಗೆಟ್ಟು ಮಗುವನ್ನು ಕೊಂದಿದ್ದಾಳೆ ಎಂದು ಹೇಳಲಾಗುತ್ತಿದೆ. ಮಗುವಿನ ಅಳುವಿನ ಶಬ್ದದಿಂದ ವಿಚಲಿತಳಾಗಿ ಮಗುವಿನೊಂದಿಗೆ ನಿತ್ಯಾನಂದ ಕಾಲೋನಿಯಲ್ಲಿರುವ ತನ್ನ ತವರು ಮನೆಗೆ ತೆರಳಿದ್ದಳು. ಈ ವೇಳೇ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದು, ಮಗುವಿನ ಶವ ಪತ್ತೆಯಾದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

Facebook Comments

Sri Raghav

Admin