ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ ಮೃತಪಟ್ಟ ನಿವೃತ್ತ ಸೈನಿಕ

ಈ ಸುದ್ದಿಯನ್ನು ಶೇರ್ ಮಾಡಿ

Dead-Train--01
ಕೋಲಾರ, ಆ.13- ಹಳಿ ದಾಟುತ್ತಿದ್ದ ನಿವೃತ್ತ ಸೈನಿಕರೊಬ್ಬರು ರೈಲಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಗಾರಪೇಟೆಯ ಪುಟ್ಟಸ್ವಾಮಿ ಮೊದಲಿಯಾರ್ ಬಡಾವಣೆಯ ನಿವಾಸಿ ದೊರೆಸ್ವಾಮಿ (58) ಮೃತಪಟ್ಟ ನಿವೃತ್ತ ಸೈನಿಕ.

ಮೃತರು 10 ವರ್ಷಗಳ ಹಿಂದೆ ವಿಆರ್‍ಎಸ್ ತೆಗೆದುಕೊಂಡು ಸೇವೆಯಿಂದ ನಿವೃತ್ತಿಯಾಗಿದ್ದರು. ಇಂದು ಬೆಳಗ್ಗೆ ತಮಿಳುನಾಡಿಗೆ ತೆರಳಲೆಂದು ಬಂಗಾರಪೇಟೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಹಳಿ ದಾಟುತ್ತಿದ್ದಾಗ ರೈಲು ಇವರಿಗೆ ಡಿಕ್ಕಿ ಹೊಡೆದಿದ್ದು, ದೊರೆಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ಕೂಡಲೇ ಬಂಗಾರಪೇಟೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಂಗಾರಪೇಟೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin