ಕೃಷಿ ವಿವಿಯಲ್ಲಿ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

agrical-dharwada

ಧಾರವಾಡದ ಕೃಷಿ ವಿಶ್ವವಿದ್ಯಾಲಯವು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಆಹ್ವಾನಿಸಿದೆ.

ಹುದ್ದೆಗಳ ಸಂಖ್ಯೆ – 07
ಹುದ್ದೆಗಳ ವಿವರ
1.ಫಾರ್ಮ್ ಮ್ಯಾನೇಜರ್
2.ಪ್ರೋಗ್ರಾಂ ಅಸಿಸ್ಟೆಂಟ್ (ಕಂಪ್ಯೂಟರ್)
3.ಪ್ರೋಗ್ರಾಂ ಅಸಿಸ್ಟೆಂಟ್ (ಲ್ಯಾಬ್ ಟೆಕ್)
4.ಅಸಿಸ್ಟೆಂಟ್
5.ಬೆರಳಚ್ಚುಗಾರ
6.ಚಾಲಕ

ವಿದ್ಯಾಭ್ಯಾಸ : ಕ್ರ.ಸಂ 1ರ ಹುದ್ದೆಗೆ ಕೃಷಿ ಅಥವಾ ತೋಟಗಾರಿಕೆ ವಿಷಯದಲ್ಲಿ ಪದವಿ, ಕ್ರ.ಸಂ 2ರ ಹುದ್ದೆಗೆ ಬಿಎಸ್ಸಿ (ಸಿಎಸ್), ಬಿಸಿಎ, ಬಿಎಸ್ಸಿ ಜೊತೆ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್, ಕ್ರ.ಸಂ 3 ರ ಹುದ್ದೆಗೆ ಕೃಷಿ ಅಥವಾ ತೋಟಗಾರಿಕೆ ವಿಷಯದಲ್ಲಿ ಪದವಿ, ಕ್ರ.ಸಂ 4ರ ಹುದ್ದೆಗೆ ಪದವಿ, ಕ್ರ.ಸಂ 5ರ ಹುದ್ದೆಗೆ ಪದವಿ, ಕ್ರ. ಸಂ 6ರ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು.
ಸಂದರ್ಶನ ನಡೆಯುವ ದಿನಾಂಕ : 28-08-2018 ರಂದು ಬೆಳಿಗ್ಗೆ 11 ಗಂಟೆಗೆ ಸಂದರ್ಶನ ಪ್ರಾರಂಭವಾಗಲಿದೆ.
ಸಂದರ್ಶನ ನಡೆಯುವ ಸ್ಥಳ : ವಿಸ್ತರಣಾ ನಿರ್ದೇಶನಾಲಯ, ಕೃಷಿ ಮಹಾವಿದ್ಯಾಲಯ, ಧಾರವಾಡ – 580005 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  www.uasd.edu  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿ 

Facebook Comments

Sri Raghav

Admin