ಈ ದುಬಾರಿ ಐಸ್ ಕ್ರೀಮ್ ಬಗ್ಗೆ ನಿಮಗೆಷ್ಟು ಗೊತ್ತು..?

ಈ ಸುದ್ದಿಯನ್ನು ಶೇರ್ ಮಾಡಿ

ds-1
ಇಂದಿನ ಜಗತ್ತು ವೈವಿಧ್ಯ ಮಯ ಆಹಾರಗಳ ಆಗರ. ಬಗೆಬಗೆಯ ಆಹಾರಗಳನ್ನು ಅತ್ಯಂತ ಸ್ವಾದಿಷ್ಟವಾಗಿ ತಯಾರಿಸಿ ಕಲಾತ್ಮಕವಾಗಿ ವಿನ್ಯಾಸಗೊಳಿಸುವ ಪರಿಪಾಠವೂ ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ನ್ಯೂಯಾರ್ಕ್‍ನ ಹೋಟೆಲೊಂದರಲ್ಲಿ ಉಣ ಬಡಿಸುತ್ತಿರುವ ದುಬಾರಿ ಪುಷ್ಕಳ ಸಾದಿಷ್ಟ ಖಾದ್ಯವೊಂದು ಆಹಾರ ಪ್ರಿಯರ ಜಿಹ್ವಾ ಚಾಪಲ್ಯ ತಣಿಸುತ್ತಿದೆ.

ಇದು ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿರುವ ಬ್ಯಾಕರ್ಯಾಟ್ ಹೋಟೆಲ್. ಇಲ್ಲಿನ 1,500 ಡಾಲರ್ ಮೌಲ್ಯದ ಬೇರ್ ಎಕ್ಸ್‍ಟ್ರಾಆರ್ಡಿನರೀ ಎಂಬ ಸಂಡೇ (ಐಸ್‍ಕ್ರೀಂ) ಖ್ಯಾದ ಜನಪ್ರಿಯವಾಗುತ್ತಿದೆ.  ಇಲ್ಲಿ ಅತ್ಯಂತ ದುಬಾರಿ ಮತ್ತು ರುಚಿಕರ ಸಂಡೇ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಐಸ್‍ಕ್ರೀಮ್ ಜೊತೆ ಹಣ್ಣುಗಳು, ಶುಷ್ಕಫಲಗಳು, ಕ್ರೀಮ್‍ಗಳನ್ನು ಬಳಸಿ ಕಲಾತ್ಮಕವಾಗಿ ವಿನ್ಯಾಸಗೊಳಿಸುವ ವಿಶಿಷ್ಟ ಆಹಾರಕ್ಕೆ ಸಂಡೇ ಎಂದು ಹೆಸರು. ಈ ಹೋಟೆಲ್‍ನಲ್ಲಿ ಸ್ವಾದಿಷ್ಟ ಸಂಡೇಗಳನ್ನು ತಯಾರಿಸಲಾಗುತ್ತದೆ. ಝೂ ಬೇರ್ ಎಂಬ ಹೆಸರಿನ ಸಂಡೇ ಬೆಲೆ 1,200 ಡಾಲರ್‍ಗಳು. ಕ್ರಿಸ್ಟಲ್ ಮತ್ತು ಪೊರ್ಸಿಲೀನ್ ಬಟ್ಟಲಿನಲ್ಲಿ ಮಡಗಾಸ್ಕರ್ ವೆನಿಲ್ಲಾ ಐಸ್‍ಕ್ರೀಮ್ ಜೊತೆ ಇದನ್ನು ಮೆಲ್ಲುವುದು ಬಲು ರುಚಿಕರ.

ds-2
ಬ್ಯಾಕರ್ಯಾಟ್ ಹೋಟೆಲ್‍ನ ಮಹಾ ಪೋಷಕರಾದ ವರ್ಜಿಲಿಯಾ ವಿರ್ಜೋಘೇ ಈ ಆಹಾರವನ್ನು ಸವಿದು ಸಂತೃಪ್ತ ಭಾವ ಹೊಂದಿದರು. ಇಲ್ಲಿ ರುಚಿ, ಸ್ವಾದ, ಶೈಲಿ, ಕಲಾತ್ಮಕತೆ ಮತ್ತು ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗುತ್ತದೆ. ವೆನಿಲ್ಲಾ ಐಸ್‍ಕ್ರೀಮ್ ಮೇಲೆ ಶಾಂಪೇನ್ ಸಾಸ್, ವೈಟ್ ಚಾಕೋಲೆಟ್ ಶೆಲ್, ಕೆಂಪು,. ಹಸಿರು ಮತ್ತು ಹಳದಿ ಬಣ್ಣದ ಕೋಕೊ ಬಟರ್‍ನೊಂದಿಗೆ ಕಲಾ ಸ್ಪರ್ಶ ನೀಡಲಾಗುತ್ತದೆ. ಅದರ ಮೇಲೆ ಚಿನ್ನದ ಎಲೆ ಮತ್ತು ಬೆಳ್ಳಿ ತುಣುಕುಗಳನ್ನು ಜೋಡಿಸಲಾಗುತ್ತದೆ. ಇನ್ನೂ ಕೆಲವು ಸಂಡೇ ತಿನಿಸುಗಳನ್ನು ಗೂಡಿನ ಮಾದರಿಯಲ್ಲಿ ಚೆಟ್ಟೆಗಳು ಮತ್ತು ಬಣ್ಣಬಣ್ಣದ ಹೂವುಗಳ ಖಾದ್ಯಗಳನ್ನು ಸಿಂಗರಿಸಲಾಗುತ್ತದೆ. ಇವುಗಳನ್ನು ಸೃಷ್ಟಿಸಲು ದೀರ್ಘಾವಧಿ ಬೇಕು ಎನ್ನುತ್ತಾರೆ ಹೋಟೆಲ್‍ನ ಪೆಸ್ಟ್ರೀ ಚೆಫ್ ರೊಸಾರಿಯೋ ವ್ಯಾಕಬಯಾಶೀ.

ds

Facebook Comments