ಸಿಎಂ ಭತ್ತ ನಾಟಿ ಕಾರ್ಯಕ್ರಮಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

WhatsApp Image 2018-08-11 at 3.15.51 PM
ಮಂಡ್ಯ, ಆ.14-ಮುಖ್ಯಮಂತ್ರಿಗಳ ಭತ್ತ ನಾಟಿ ಕಾರ್ಯಕ್ರಮಕ್ಕೆ ಲಕ್ಷಾಂತರ ರೂ. ಖರ್ಚಾಗಿದೆ ಎಂಬುದು ಸುಳ್ಳು. ಇದಕ್ಕೆ ಕೇವಲ 50 ರಿಂದ 70 ಸಾವಿರ ರೂ. ಮಾತ್ರ ವ್ಯಯಿಸಲಾಗಿದೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಸ್ಪಷ್ಟಪಡಿಸಿದರು. ವಿಮ್ಸ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕಾಗಿ ಸರ್ಕಾರದ ಹಣವನ್ನು ವ್ಯಯಿಸಿಲ್ಲ. ಬದಲಿಗೆ ಸ್ಥಳೀಯ ಜೆಡಿಎಸ್ ಮುಖಂಡರು ಹಾಗೂ ರೈತರು ಸೇರಿ ಕಾರ್ಯಕ್ರಮದ ಖರ್ಚನ್ನು ನಿಭಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಭತ್ತ ನಾಟಿ ಕಾರ್ಯಕ್ರಮಕ್ಕೆ 10 ರಿಂದ 12 ಲಕ್ಷ ರೂ. ಖರ್ಚಾಗಿದೆ ಎಂದು ಹೇಳುತ್ತಿರುವುದು ಶುದ್ಧ ಸುಳ್ಳು. ಸರ್ಕಾರದಿಂದ ದುಂದುವೆಚ್ಚ ವಾಗಬಾರದು ಎಂಬ ಕಾರಣಕ್ಕೆ ಜೆಡಿಎಸ್ ಮುಖಂಡರಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂದು ವಿವರಿಸಿದರು.

Facebook Comments

Sri Raghav

Admin