ಟ್ವಿಟ್ಟರ್ ನಲ್ಲಿ ಕಾಲೆಳೆದವನಿಗೆ ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೆ ಮಾಡಿದ ಸಾನಿಯಾ..!

ಈ ಸುದ್ದಿಯನ್ನು ಶೇರ್ ಮಾಡಿ

Saniya--01
ನವದೆಹಲಿ. ಆ. 14 : ಇಂದು(ಮಂಗಳವಾರ ) ಪಾಕಿಸ್ತಾನದಲ್ಲಿ 72 ನೇ ಸ್ವಾತಂತ್ರ್ಯೋತ್ಸವ, ಈ ಹಿನ್ನೆಲೆಯಲ್ಲಿ ಟ್ವಿಟಿಗನೊಬ್ಬ ಟ್ವಿಟ್ಟರ್ ನಲ್ಲಿ ಪಾಕ್ ಸೊಸೆ, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಳನ್ನು ಟ್ರೊಲ್ ಮಾಡಿ ಮುಜುಗರಕ್ಕೀಡಾಗಿದ್ದಾನೆ.

ಟ್ವಿಟ್ಟರ್ ನಲ್ಲಿ “ಹ್ಯಾಪಿ ಇಂಡಿಪೆಂಡೆನ್ಸ್ ಡೇ ಸಾನಿಯಾ ಮಿರ್ಜಾ, ನಿಮ್ಮ ಸ್ವಾತಂತ್ರ ದಿನ ಇವತ್ತು ಅಲ್ಲವೇ..?” ಎಂದು ಟ್ವೀಟ್ ಮಾಡಿದ್ದಾನೆ ಇದಕ್ಕೆ, ಮುಟ್ಟಿ ನೋಡಿಕೊಳ್ಳುವಂತೆ ರಿಪ್ಲೇ ಮಾಡಿರುವ ಸಾನಿಯಾ ಮಿರ್ಜಾ ” ಜಿ ಇಲ್ಲ, ನನ್ನ ಮತ್ತು ನನ್ನ ದೇಶದ ಸ್ವಾತಂತ್ರ ದಿನ ನಾಳೆ, ನನ್ನ ಪತಿ ಹಾಗೂ ಆತನ ದೇಶದ ಸ್ವಾತಂತ್ರ ದಿನ ಇಂದು, ನೀವು ಕನ್ಫ್ಯೂಸ್ ಆಗಿದ್ದೀರಾ, ಈಗ ನಿಮ್ಮ ಗೊಂದಲ ನಿವಾರಣೆಯಾಗಿರಬೇಕಲ್ಲವೇ..? ಅಂದಹಾಗೆ ನಿಮ್ಮ ಸ್ವಾತಂತ್ರ ದಿನ ಯಾವಾಗ..? ಎಂದು ಮರು ಪ್ರಶ್ನೆ ಹಾಕುವ ಮೂಲಕ ಟ್ವಿಟರ್ ನಲ್ಲಿ ಕಾಲೆಳೆದವನಿಗೆ ಮುಖಕ್ಕೆ ಹೊಡೆದಂತ ಉತ್ತರಿಸಿದ್ದಾಳೆ.

ಸಾನಿಯಾ ಮಿರ್ಝಾ ಪಾಕಿಸ್ತಾನ ಕ್ರಿಕೆಟಿಗ ಶುಐಬ್ ಮಲಿಕ್‌ರನ್ನು ವಿವಾಹದ ಬಳಿಕ ನಿರಂತರವಾಗಿ ಸಾನಿಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನಿಸುತ್ತಾ ಬಂದಿದ್ದಾರೆ.  ಈ ಮೂಲಕ ತಾನು ಪಾಕಿಸ್ತಾನದ ಸೊಸೆಯಾದರೂ ಭಾರತದ ಮಗಳು ಎಂದು ಸಾರುವ ಮೂಲಕ ತನ್ನ ದೇಶಪ್ರಮವನ್ನು ಸಾನಿಯಾ ಮಿರ್ಜಾ ವ್ಯಕ್ತಪಡಿಸಿದ್ದಾಳೆ. ಟೆನಿಸ್ ತಾರೆ ಸಾನಿಯಾ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯಬ್ ಮಲಿಕ್ ಜೊತೆ 2010 ರಲ್ಲಿ ಮದುವೆಯಾಗಿದ್ದಳು.

Facebook Comments

Sri Raghav

Admin