ಅನ್ವೇಷಣಾತ್ಮಕ ನಗರಗಳಲ್ಲಿ ಟೋಕಿಯೋ ನಂ.1 ಮುಂಬೈಗೆ 92, ಬೆಂಗಳೂರಿಗೆ 139 ಸ್ಥಾನ..!

ಈ ಸುದ್ದಿಯನ್ನು ಶೇರ್ ಮಾಡಿ

best-citys
ಮುಂಬೈ, ಆ.14- ವಿಶ್ವದ ಅನ್ವೇಷಣಾತ್ಮಕ ನಗರಗಳ ಪಟ್ಟಿಯಲ್ಲಿ ಟೋಕಿಯೋ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದ್ದರೆ, ಭಾರತದ ವಾಣಿಜ್ಯ ನಗರಿ ಮುಂಬೈ (92) , ಉದ್ಯಾನನಗರಿ, ಸಿಲಿಕಾನ್ ಸಿಟಿ ಎಂದು ಬಿಂಬಿಸಿಕೊಂಡಿರುವ ಬೆಂಗಳೂರು (139)ನೆ ಸ್ಥಾನ ಪಡೆದುಕೊಂಡಿದೆ.  ಕಮರ್ಷಿಯಲ್ ಡೇಟಾ ಪ್ರೊವೆಡರ್ ಟು ಥಿಂಕ್ ನಡೆಸಿದ ಸಮೀಕ್ಷೆಯ ಪ್ರಕಾರ ಜಪಾನ್‍ನ ರಾಜಧಾನಿ ಟೋಕಿಯೋ ಅಗ್ರ ಸ್ಥಾನದಲ್ಲಿದೆ. ಉಳಿದಂತೆ ಸಾನ್‍ಫ್ರಾನ್ಸಿಸ್ಕೋ, ನ್ಯೂಯಾರ್ಕ್, ಲಾಸ್ ಏಂಜಲೀಸ್, ಸಿಂಗಾಪುರ್, ಬೊಸ್ಟನ್, ಟೊರೆಂಟೋ, ಪ್ಯಾರಿಸ್ ಮತ್ತು ಸಿಡ್ನಿ ಟಾಪ್ 10ರಲ್ಲಿ ಗುರುತಿಸಿಕೊಂಡಿದೆ.

ರೊಬೋಟಿಕ್ ಹಾಗೂ 3ಡಿ ತಂತ್ರಜ್ಞಾನದಲ್ಲಿ ಲಂಡನ್, ಸ್ಯಾನ್‍ಫ್ರಾನ್ಸಿಸ್ಕೊ ಹಿನ್ನಡೆ ಅನುಭವಿಸಿದ್ದರಿಂದ ಟೋಕಿಯೋ ಟಾಪ್ 1 ಸ್ಥಾನವನ್ನು ಅಲಂಕರಿಸಿದೆ ಎಂದು ಕಮರ್ಷಿಯಲ್ ಡೇಟಾ ಪ್ರೊವೆಡರ್ ಟು ಥಿಂಕ್‍ನ ನಿರ್ದೇಶಕ ಕ್ರಿಸ್ಟೋಫಾರ್ ಹೇರ್ ತಿಳಿಸಿದ್ದಾರೆ. ವೆಬ್ ಸೆನ್ಸಾರ್‍ಶಿಪ್, ಸಂಪತ್ತು ವಿತರಣೆ, ಹಸಿರು ವ್ಯಾಪಾರದ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿದ್ದರಿಂದ ಸಿಡ್ನಿ, ಸಿಂಗಾಪುರ್ ಟಾಪ್ 10ನಲ್ಲಿ ಸ್ಥಾನ ಪಡೆದಿದೆ ಎಂದು ಹೇರ್ ತಿಳಿಸಿದ್ದಾರೆ.

ಟಾಪ್ 500ರಲ್ಲಿ ಭಾರತ ನಗರಗಳು:
ಟಾಪ್ 100 ನವೀಕರಣ ನಗರಗಳಲ್ಲಿ ಮುಂಬೈ ಕಳೆದ ಬಾರಿ 90 ನೆ ಸ್ಥಾನದಲ್ಲಿತ್ತು ಈ ವರ್ಷ 2 ಸ್ಥಾನಗಳನ್ನು ಕಳೆದುಕೊಂಡು 92ನೆ ಸ್ಥಾನಕ್ಕೆ ಕುಸಿದಿದ್ದರೆ, ಬೆಂಗಳೂರು 139, ನವದೆಹಲಿ 199, ಚೆನ್ನೈ 252, ಕೋಲ್ಕತ್ತಾ 283, ಹೈದರಾಬಾದ್ 316, ಅಹಮದಾಬಾದ್ 345, ಪುಣೆ 346, ಜೈಪುರ 393, ಸೂರತ್ 424, ಲಖನೌ 442, ಕನ್ಪುರ 448, ಮಧುರೈ 452 ಸ್ಥಾನಗಳಲ್ಲಿವೆ.

Facebook Comments

Sri Raghav

Admin