ಕಿರುಚಿತ್ರಗಳಲ್ಲಿ ನಟಿಸಿದ್ದ ಹೇಮಂತ್‍ಕುಮಾರ್ ರಸ್ತೆ ಅಪಘಾತದಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ನೆಲಮಂಗಲ, ಆ.15-ಕಿರುಚಿತ್ರಗಳಲ್ಲಿ ನಟಿಸಿದ್ದ ವಿಕಲಚೇತನ ಹೇಮಂತ್‍ಕುಮಾರ್ (23) ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಈತ ತನ್ನ ಎರಡು ಕೈಗಳನ್ನು ಕಳೆದುಕೊಂಡಿದ್ದರೂ ದ್ವಿಚಕ್ರ ವಾಹನವನ್ನು ಅಲ್ಟರ್ ಮಾಡಿಕೊಂಡು ಕಾಲಿನಿಂದಲೇ ಆ್ಯಕ್ಸಿಲೇಟರ್ ಒತ್ತಿ ಬೈಕ್ ಚಲಾಯಿಸುತ್ತಿದ್ದ ಇವರು, ಎರಡು ಮೂರು ಕಿರುಚಿತ್ರಗಳಲ್ಲೂ ಬೈಕ್ ಚಲಾಯಿಸುವ ಪಾತ್ರ ನಿರ್ವಹಿಸಿದ್ದಾರೆ.

ಮೂಲತಃ ಬೆಂಗಳೂರಿನವರಾದ ಹೇಮಂತ್‍ಕುಮಾರ್ ರಾತ್ರಿ 10.30ರಲ್ಲಿ ಬೆಂಗಳೂರು ಬಿಟ್ಟು ಸ್ನೇಹಿತ ವೀರೇಂದ್ರನ ಜೊತೆ ತುಮಕೂರು ಕಡೆಗೆ ಹೋಗುತ್ತಿದ್ದಾಗ ಮಧ್ಯರಾತ್ರಿ 12.30ರಲ್ಲಿ ಈತನ ಬೈಕ್‍ಗೆ ಅಳವಡಿಸಿದ್ದ ಎಡಭಾಗದ ಚಕ್ರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಕೆಳಗೆ ಬಿದ್ದಿದ್ದಾರೆ.   ಹೇಮಂತ್‍ಕುಮಾರ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರೆ ಸ್ನೇಹಿತ ವೀರೇಂದ್ರನ ತಲೆಗೆ ತೀವ್ರ ಪೆಟ್ಟಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Facebook Comments

Sri Raghav

Admin