ತುಂಗಭದ್ರಾ ನದಿ ಪಾತ್ರದ ಜನರಿಗಾಗಿ ಹೊನ್ನಾಳಿಯಲ್ಲಿ 2 ಗಂಜಿ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Rain--01
ದಾವಣಗೆರೆ, ಆ.15-ತುಂಗಭದ್ರಾ ನದಿ ನೀರು ಅತಿ ಹೆಚ್ಚು ಹರಿದು ಬರುತ್ತಿರುವುದರಿಂದ ನದಿ ಪಾತ್ರದ ಜನರಿಗಾಗಿ ಹೊನ್ನಾಳಿಯಲ್ಲಿ ಎರಡು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಹಶೀಲ್ದಾರ್ ಡಾ.ನಾಗವೇಣಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊನ್ನಾಳಿಯ ಅಂಬೇಡ್ಕರ್ ಭವನದಲ್ಲಿ 90 ಜನರಿಗೆ ಬೆಳಗ್ಗಿನಿಂದಲೇ ತಿಂಡಿ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಬೊಂಬು ಬಜಾರ್‍ನ ಆಂಜನೇಯ ದೇವಸ್ಥಾನ ಬಳಿ ಇರುವ ಗುರುಭವನದಲ್ಲಿ ಇನ್ನೊಂದು ಗಂಜಿ ಕೇಂದ್ರ ತೆರೆದು 10 ಕುಟುಂಬಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಹೊನ್ನಾಳಿ ಪಟ್ಟಣದ ರಾಘವೇಂದ್ರ ಮಠದ ಬಳಿ ಇರುವ ಶ್ರೀ ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕನಕ ಕೈಗಾರಿಕಾ ಶಾಲೆಗೆ ನೀರು ನುಗ್ಗಿರುವುದರಿಂದ ರಜೆ ಘೋಷಿಸಲಾಗಿದೆ. ಚೀಲಾಪುರ ಸರ್ಕಾರಿ ಶಾಲೆಯ ಗೋಡೆ ಕುಸಿದಿದೆ. ನ್ಯಾಮತಿ ತಾಲೂಕಿನ ಚೀಲೂರು, ಗೋವಿನಕೋವಿಯಲ್ಲಿ ಒಂದೊಂದು ಮನೆಗೆ ಹಾನಿಯಾಗಿದೆ ಎಂದು ತಿಳಿಸಿದರು.

ಗೊಲ್ಲಹಳ್ಳಿ,ಬೇಲಿಮಲ್ಲೂರು, ಕೋಟೆ ಮಲ್ಲೂರು, ಹಿರೆಗೋಣಿಗೆರೆ, ಬೆನಕನಹಳ್ಳಿ, ದೇವನಾಯ್ಕನಹಳ್ಳಿಗಳು ನದಿಪಾತ್ರದಲ್ಲಿದ್ದು, ಜಮೀನುಗಳು ಜಲಾವೃತಗೊಂಡಿವೆ. ಹೊನ್ನಾಳಿಯ ಕೆಎಸ್‍ಆರ್‍ಟಿಸಿ ಡಿಪೋಗೆ ನೀರು ನುಗ್ಗಿದೆ. ಇಂತಹ ಸೂಕ್ಷ್ಮಪ್ರದೇಶಗಳಿಗೆ ಮುಂಜಾಗ್ರತೆ ಕ್ರಮ ವಹಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ನಾಗವೇಣಿ ಈ ಸಂಜೆಗೆ ತಿಳಿಸಿದರು.

Facebook Comments

Sri Raghav

Admin