ಧ್ವಜಾರೋಹಣ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Flag-Hosting--01
ಕರ್ನೂಲ್ (ಪಿಟಿಐ), ಆ.15-ದೇಶದ 72ನೇ ಸ್ವಾತಂತ್ರ್ಯೋತ್ಸವದ ಸಡಗರ-ಸಂಭ್ರಮದಲ್ಲೇ ದುರಂತವೊಂದು ಆಂಧ್ರಪ್ರದೇಶದಲ್ಲಿ ಸಂಭವಿಸಿದೆ. ಭಾರತದ ತ್ರಿವರ್ಣ ಧ್ವಜಾರೋಹಣ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಮೃತಪಟ್ಟ ಘಟನೆ ಆಂಧ್ರದ ಕರ್ನೂಲ್ ಜಿಲ್ಲೆಯ ಜುಪಡು ಬಂಗ್ಲೋ ಮಂಡಲ್‍ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅಪ್ಪಲ ನಾಯ್ಡು ಮತ್ತು ಬಸಂತ್ ರಾಣಾ ಕಾಗ್ ಮೃತಪಟ್ಟ ದುರ್ದೈವಿಗಳು. ಜುಪಡು ಮಂಡಲ್ ವ್ಯಾಪ್ತಿಯ ಬಂಗ್ಲೋ ಗ್ರಾಮದಲ್ಲಿ ಇಂದು ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಏರ್ಪಾಡಾಗಿತ್ತು. ಧ್ವಜಾರೋಹಣದ ವೇಳೆ ವಿದ್ಯುತ್ ತಂತಿಯ ಸ್ಪರ್ಶದಿಂದಾಗಿ ಇವರಿಬ್ಬರು ಮೃತಪಟ್ಟರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Facebook Comments

Sri Raghav

Admin