ಎಎಪಿ ನಾಯಕ ಅಶುತೋಷ್ ರಾಜೀನಾಮೆ

ಈ ಸುದ್ದಿಯನ್ನು ಶೇರ್ ಮಾಡಿ

AAP-101

ನವದೆಹಲಿ (ಪಿಟಿಐ), ಆ.15-ಅಮ್ ಆದ್ಮಿ ಪಾರ್ಟಿ(ಎಎಪಿ ಅಶುತೋಷ್ ಇಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷಕ್ಕೆ ಇದರಿಂದ ಹಿನ್ನಡೆಯಾಗಿದೆ.

ತಮ್ಮ ರಾಜೀನಾಮೆಗೆ ತೀರಾ ವೈಯಕ್ತಿಕ ಕಾರಣವನ್ನು ನೀಡಿರುವ ಅವರು, ಪ್ರತಿಯೊಂದು ಪಯಣಕ್ಕೂ ಒಂದು ಕೊನೆ ಇರುತ್ತದೆ. ಎಎಪಿ ಜೊತೆ ನನ್ನ ಒಡನಾಟ ಸುಂದರ ಮತ್ತು ಕ್ರಾಂತಿಕಾರಕವಾಗಿತ್ತು. ಅದು ಈಗ ಮುಕ್ತಾಯಗೊಂಡಿದೆ. ಪಕ್ಷಕ್ಕೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ಇದು ತೀರಾ ವೈಯಕ್ತಿಕ ಕಾರಣ. ನಾನು ಪಕ್ಷದಲ್ಲಿದಷ್ಟೂ ದಿನ ನನಗೆ ಸಹಕಾರ ಮತ್ತು ಬೆಂಬಲ ನೀಡಿದ ಎಲ್ಲರಿಗೂ ಮತ್ತು ಪಕ್ಷಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin