ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ 30 ಯೋಧರ ನರಮೇಧ

ಈ ಸುದ್ದಿಯನ್ನು ಶೇರ್ ಮಾಡಿ

Taliban--011

ಕಾಬೂಲ್, ಆ.15-ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಪ್ರಾಬಲ್ಯ ಮತ್ತು ಅಟ್ಟಹಾಸ ಮುಂದುವರಿದಿದೆ. ದೇಶದ ಉತ್ತರ ಭಾಗದ ಎರಡು ತಪಾಸಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಂಡುಕೋರರು 30ಕ್ಕೂ ಹೆಚ್ಚು ಯೋಧರು ಮತ್ತು ಪೊಲೀಸರ ನರಮೇಧ ನಡೆಸಿದ್ದಾರೆ. ಈ ಕೃತ್ಯದಲ್ಲಿ ಭದ್ರತಾಪಡೆಯ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ.

ಉತ್ತರ ಆಫ್ಘಾನಿಸ್ತಾನದ ಕೆಲವು ಭಾಗಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ತಾಲಿಬಾನ್ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಕಾಳಗ ಮುಂದುವರಿದಿದ್ದು, ಸಾವು-ನೋವಿನ ವರದಿಗಳಿವೆ.
ತಾಲಿಬಾನ್ ಬಂಡುಕೋರರ ಉಪಟಳ ಹೆಚ್ಚಾಗಿರುವುದರಿಂದ ಅವರನ್ನು ನಿಗ್ರಹಿಸಲು ಯೋಧರು ಮತ್ತು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಗುಂಡಿನ ಕಾಳಗದಿಂದ ನಾಗರಿಕರು ಭಯಭೀತರಾಗಿದ್ದಾರೆ.

ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಬೆಂಬಲದೊಂದಿಗೆ ಮತ್ತೆ ಚಿಗುತುಕೊಂಡಿರುವ ತಾಲಿಬಾನಿಗಳನ್ನು ಮಟ್ಟ ಹಾಕಲು ಹೆಚ್ಚುವರಿ ಸೇನಾಪಡೆಯನ್ನು ನಿಯೋಜಿಸಲಾಗಿದೆ.

Facebook Comments

Sri Raghav

Admin