ವಿಶ್ವಕ್ಕೆ ಭಾರತೀಯರ ಕೊಡುಗೆ ಅನಾವರಣಗೊಳಿಸಿದ ಚೀನಿ ಲೇಖಕ..!

ಈ ಸುದ್ದಿಯನ್ನು ಶೇರ್ ಮಾಡಿ

India--01

ಕೆನಡಾದ ಟೊರೊಂಟೊ ಯೂನಿವರ್ಸಿಟಿಯಲ್ಲಿ ಕಾರ್ಯನಿರ್ವಹಿಸಿದ್ದ ಚೀನಾದ ನಿವೃತ್ತ ಪ್ರೊಫೆಸರ್ ಬರೆದಿರುವ ಈಸ್ ಎನ್‍ಷಿಯಂಟ್ ಇಂಡಿಯಾ ಓವರ್‍ರೇಟೆಡ್?(ಪ್ರಾಚೀನ ಭಾರತ ಪುರಸ್ಕರಿಸಲ್ಪಟ್ಟಿದೆಯೇ?) ಎಂಬ ವಿಶ್ಲೇಷಣಾತ್ಮಕ ಲೇಖನ ಭಾರತದ ಅಗಾಧ ಸಾಮಥ್ರ್ಯದ ಬಗ್ಗೆ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಇವರು ಬರೆದ ಲೇಖನಕ್ಕೆ ಜಗತ್ತಿನ ವಿವಿಧ ದೇಶಗಳಿಂದ ಅಪಾರ ಮೆಚ್ಚುಗೆಗಳೊಂದಿಗೆ ಅದ್ಭುತ ಪ್ರತಿಕ್ರಿಯೆಗಳೂ ಲಭಿಸಿವೆ. ಇವರು ತಮ್ಮ ವಿಶ್ಲೇಷಣಾತ್ಮಕ ಲೇಖನದಲ್ಲಿ ಪುರಾತನ ಭಾರತದ ಸಾಧನೆಗಳನ್ನು ಕೊಂಡಾಡಿದ್ದಾರೆ. ಭಾರತವು ತುಂಬಾ ವೈವಿಧ್ಯಮಯ ಸಂಸ್ಕøತಿ, ಪರಂಪರೆ ಮತ್ತು ಇತಿಹಾಸ ಹೊಂದಿರುವ ವಿಶಿಷ್ಟ ಭವ್ಯ ರಾಷ್ಟ್ರ. ಈ ದೇಶವನ್ನು ಎಷ್ಟು ಹೊಗಳಿದರೂ ಸಾಲದು. ವೈದ್ಯ ವಿಜ್ಞಾನದಿಂದ ಮೊದಲ್ಗೊಂಡು ಬಾಹ್ಯಾಕಾಶ ತಂತ್ರಜ್ಞಾನಗಳವರೆಗೆ ಭಾರತೀಯರು ಮುಂಚೂಣಿಯಲ್ಲಿದ್ದಾರೆ. ದುಃಖಕರ ವಿಷಯವೆಂದರೆ ಭಾರತಕ್ಕೆ ಲಭಿಸಬೇಕಾದ ಮಾನ್ಯತೆ ಮತ್ತು ಪುರಸ್ಕಾರಗಳು ದಕ್ಕಿಲ್ಲ.

ಮೂಢನಂಬಿಕೆಗಳನ್ನು ಪಾಲಿಸುವ ದೇಶ ಎಂಬುದಾಗಿ ಭಾರತವನ್ನು ಪರಿಗಣಿಸಲ್ಪಟ್ಟಿರುವುದು ದುರದೃಷ್ಟಕರ. ಇದೇ ಸಂದರ್ಭದಲ್ಲಿ ಅಗಾಧ ಪ್ರತಿಭೆಯುಳ್ಳ ಭಾರತೀಯರು ಗಣಿತಶಾಸ್ತ್ರ ಮತ್ತು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹ ಕೊಡುಗೆಗಳ ಮೇಲೆ ನಾವೀಗ ಬೆಳಕು ಚೆಲ್ಲೋಣ ಎಂದು ಅವರು ತಮ್ಮ ಲೇಖನದಲ್ಲಿ ಮುನ್ನಡಿ ಬರೆದಿದ್ದಾರೆ. ಭಾರತದ ಪ್ರಾಚೀನ ವಿಸ್ಮಯ ಅನ್ವೇಷಣೆ ಮತ್ತು ಸಂಶೋಧನೆಗಳ ಕುರಿತು ವಿಶ್ಲೇಷಣೆಯ ಆಯ್ದ ಭಾಗಗಳ ಕನ್ನಡ ರೂಪಾಂತರ ಇಲ್ಲಿದೆ.
ಗಣಿತ, ವಿಜ್ಞಾನ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತೀಯರು ನೀಡಿರುವ ಕೊಡುಗೆ ಅಮೂಲ್ಯ. ಗಣಿತ ಕ್ಷೇತ್ರಕ್ಕೆ ಭಾರತದ ಅತಿ ದೊಡ್ಡ ಕೊಡುಗೆ ಎಂದರೆ ಸೊನ್ನೆ ಅರ್ಥಾತ್ ಝಿರೋ.. ಸೊನ್ನೆಯ ಪರಿಕಲ್ಪನೆ ಗಣಿತಲೋಕದ ವಿಸ್ಮಯ. ಯಾವುದೇ ಅಂಕಿಯ ಮುಖಬೆಲೆ ನಿರ್ಧರಿಸುವಲ್ಲಿ 0 ಪ್ರಮುಖ ಪಾತ್ರ ವಹಿಸುತ್ತದೆ. ಅಂಕಿಯ ಹಿಂದೆ ಶೂನ್ಯ ಬಂದರೆ ಅದರ ಮËಲ್ಯ ಕಡಿಮೆ. ಅದೇ 0 ಒಂದು ಸಂಖ್ಯೆಯ ಮುಂದೆ ಬಂದಾಗ ಅದರ ಮೌಲ್ಯ ವೃದ್ದಿಯಾಗುತ್ತದೆ. ಸೊನ್ನೆಗಳು ಹೆಚ್ಚಾದಷ್ಟೂ ಅದ ಬೆಲೆಯೂ ಅಧಿಕಗೊಳ್ಳುತ್ತಾ ಹೋಗುತ್ತದೆ. ಇಂಥ ಶೂನ್ಯದ ಮಹತ್ವವನ್ನು ಆವಿಷ್ಕರಿಸಿದ ಭಾರತೀಯರ ಸಾಧನೆ ಅನನ್ಯ. ಸೊನ್ನೆಯ ಕಿಮ್ಮತ್ತನ್ನು ಭಾರತೀಯರು ಏಳನೇ ಶತಮಾನದಲ್ಲೇ ಪತ್ತೆ ಮಾಡಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು.
ಧನಮೊತ್ತ ಮತ್ತು ಋಣಮೊತ್ತಗಳನ್ನು ಲೆಕ್ಕ ಹಾಕುವ ಮಾಪಕದಲ್ಲಿ ಪ್ರಾರಂಭ ಬಿಂದು ಎಂದು ಇನ್ನು ಶತಶತಮಾನಗಳ ಹಿಂದೆಯೇ ಪರಿಗಣಿಸಲಾಗಿತ್ತು. ಕೇವಲ ಹತ್ತು ಸಂಕೇತಗಳನ್ನು ಬಳಸುವ ಮೂಲಕ ಆಗಲೇ ಒಂದು ವಸ್ತುವಿನ ಬೆಲೆಯನ್ನು ನಿಗದಿಗೊಳಿಸಿದ್ದ ಚಾಣಾಕ್ಷರು ಭಾರತೀಯರೇ ಆಗಿದ್ದರು. ಮೊದಲು ಧನಾತ್ಮಕ (ನೆಗೆಟಿವ್) ಸಂಖ್ಯೆಗಳನ್ನು ಬಳಸಿ ಆನಂತರ ದಶಮಾಂಶ ಭಿನ್ನರಾಶಿಗಳನ್ನು ಕಂಡು ಹಿಡಿದರು. ಈ ಜಗತ್ತು ಇಂದು ಅನುಸರಿಸುತ್ತಿರುವ ಲೆಕ್ಕ ಪದ್ದತಿಗಳಿಗೆ ಇದೇ ಮೂಲಾಧಾರ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇದನ್ನು ಕಂಡು ಹಿಡಿದವರು ಭಾರತದ ಪ್ರಾಚೀನ ಮಹಾ ಗಣಿತಜ್ಞ ಆರ್ಯಭಟ..

India--03

# ದಶಮಾಂಶ ಪದ್ಧತಿ : 
ಗಣಿತ ಕ್ಷೇತ್ರಕ್ಕೆ ಭಾರತೀಯರ ಮತ್ತೊಂದು ಅನುಪಮ ಕೊಡುಗೆ ಎಂದರೆ ದಶಮಾಂಶ ಪದ್ದತಿಯನ್ನು ಅನುಷ್ಠಾನಗೊಳಿಸಿದ್ದು. ಹತ್ತು ಸಂಕೇತಗಳ ಮೂಲಕ ಎಲ್ಲ ಸಂಖ್ಯೆಗಳ ಮËಲ್ಯಗಳನ್ನು ಅಭಿವ್ಯಕ್ತಗೊಳಿಸುವ ವಿಧಾನವೇ ದಶಮಾಂಶ ಪದ್ಥತಿ(ಡೆಸಿಮಲ್ ಸಿಸ್ಟಮ್). ಅಚ್ಚರಿಯ ಸಂಗತಿ ಎಂದರೆ ಭಾರತದ ಮೇಲೆ ದಾಳಿ ಮಾಡಿದ ಅರಬ್ಬರು ಜನಿಸುವುದಕ್ಕೂ ಎಷ್ಟೋ ವರ್ಷಗಳ ಮುನ್ನವೇ ಹಿಂದುಗಳಿಂದ ಸೊನ್ನೆ ಮತ್ತು ದಶಮಾಂಶ ಪದ್ಧತಿಯನ್ನು ಆವಿಷ್ಕರಿಸಲಾಗಿತ್ತು. ಭಾರತದ ಮೇಲೆ ಅರಬ್ಬರು ಆಕ್ರಮಣ ಮಾಡಿದಾಗ ಸೊನ್ನೆ ಮತ್ತು ಸಂಖ್ಯೆಗಳನ್ನು ಹಿಂದುಗಳಿಂದ ಕಲಿತುಕೊಂಡು ನಂತರ ಅದನ್ನು ತಮ್ಮದೇ ರೀತಿಯಲ್ಲಿ ಅಳವಡಿಸಿಕೊಂಡಿರುವುದು ಸುಳ್ಳಲ್ಲ.

#ಸಂಖ್ಯಾ ಸಂಕೇತನಗಳು :
ಭಾರತೀಯರು ಕ್ರಿ.ಪೂ.500ರ ಆರಂಭದಲ್ಲೇ ಒಂದರಿಂದ ಒಂಭತ್ತರ ಪ್ರತಿಯೊಂದು ಸಂಖ್ಯೆಗಾಗಿ ವಿಭಿನ್ನ ಸಂಕೇತ ಮತ್ತು ಚಿಹ್ನೆಗಳ ವ್ಯವಸ್ಥೆಯನ್ನು ಹೊಂದಿದ್ದರು. ಭಾರತಕ್ಕೆ ದಂಡೆತ್ತಿ ಬಂದ ಅರಬ್ಬರು ಇದನ್ನು ಅಳವಡಿಸಿಕೊಂಡು ಈ ವಿಧಾನಕ್ಕೆ ಹಿಂದು ಸಂಖ್ಯೆಗಳು ಎಂದು ಕರೆದರು.
ಶತಮಾನಗಳ ನಂತರ ಈ ಸಂಖ್ಯಾ ಸಂಕೇತನಗಳನ್ನು(ನ್ಯೂಮರಿಕಲ್ ನೋಟೇಷನ್ಸ್) ಆನಂತರ ಅಳವಡಿಸಿಕೊಂಡ ಪಾಶ್ಚಿಮಾತ್ಯ ಜಗತ್ತಿನ ದೇಶಗಳು ಇದನ್ನು ಅರಬ್ ಸಂಖ್ಯೆಗಳೆಂದು ಕರೆದರು. ಅರಬ್ ವ್ಯಾಪಾರಿಗಳ ಮೂಲಕ ಇದು ಪಾಶ್ಚಿಮಾತ್ಯರನ್ನು ತಲುಪಿದ ಕಾರಣ ಇದಕ್ಕೆ ಆ ಹೆಸರು ಬಂತು. ವಾಸ್ತವವಾಗಿ ಇದು ಹಿಂದು ಸಂಖ್ಯೆಗಳೇ ಆಗಿವೆ.

India--02

# ಫಿಬ್ಬೋನಸ್ಸಿ ಸಂಖ್ಯೆಗಳು  : 
ಇಟಲಿಯ ಖ್ಯಾತ ಗಣಿತಜ್ಞ ಫಿಬ್ಬೋನಸ್ಸಿ ಅವಿಷ್ಕರಿಸಿದ ಸಂಖ್ಯಾರಚನೆಯಲ್ಲಿನ ಛಂದೋಬದ್ಧ ಸಿದ್ಧಾಂತ ಮತ್ತು ಪ್ರಯೋಗಗಳ ಮೂಲವೂ ಕೂಡ ಭಾರತದ್ದೇ ಆಗಿದೆ. ಸಂಸ್ಕøತದಲ್ಲಿನ ಛಂದಶಾಸ್ತ್ರಕ್ಕೆ ಸಂಬಂಧಪಟ್ಟಂತೆ ವೇದ ವಿದ್ವಾಂಸ ಪಿಂಗಳ ಅವರಿಂದ ಉಲ್ಲೇಖಿಸಿದ ಮಾತ್ರಮೆರು ಎಂಬ ಭಾರತೀಯ ಪ್ರಾಚೀನ ಗಣಿತಶಾಸ್ತ್ರದಲ್ಲೇ ಫಿಬ್ಬೋನಸ್ಸಿ ಸಂಖ್ಯೆಗಳು ಹಾಗೂ ಅವುಗಳ ಕ್ರಮಬದ್ಧ ಸಂಖ್ಯೆಗಳು ಮೊದಲು ಗೋಚರಿಸಿದ್ದವು. ನಂತರ ಈ ಸಂಖ್ಯೆಗಳಿಗೆ ಪ್ರಸಿದ್ಧ ಗಣಿತಗಾರರಾದ ವಿರಾಹಂಕ, ಗೋಪಾಲ ಮತ್ತು ಹೇಮಚಂದ್ರ ಅವರು ಸ್ಪಷ್ಟ ಲಯಬದ್ಧ ರೂಪ ನೀಡಿದರು. ಇದರ ಆಧಾರದ ಮೇಲೆ ಇಟಲಿ ಮೂಲಕ ಪಾಶ್ಚಿಮಾತ್ಯ ಮತ್ತು ಐರೋಪ್ಯ ಗಣಿತಶಾಸ್ತ್ರಜ್ಞರಿಗೆ ಇದರ ಪರಿಚಯವಾಯಿತು.

# ಜೋಡಿ ಸಂಖ್ಯೆಗಳು  :
ಕಂಪ್ಯೂಟರ್ ಪ್ರೋಗ್ರಾಂಗಳನ್ನು ಬರೆಯಲು ಬಳಸುವ ಮೂಲ ಭಾಷೆಯೇ ಜೋಡಿ ಸಂಖ್ಯೆಗಳು ಅಥವಾ ಯುಗಳ ಸಂಖ್ಯೆಗಳು(ಬೈನರಿ ನಂಬರ್ಸ್). ಇದು ಮೂಲತ: ಎರಡು ಸಂಖ್ಯೆಗಳ ಜೋಡಿ. ಉದಾಹರಣೆಗೆ 1 ಮತ್ತು 0. ಈ ಸಂಯೋಜನೆಯಲ್ಲಿ ಕಂಪ್ಯೂಟರ್ ಪರಿಭಾಷೆಯಲ್ಲಿ ಬಿಟ್ಸ್ ಮತ್ತು ಬೈಟ್ಸ್ ಎನ್ನುವರು. ಮತ್ತೊಂದು ವಿಸ್ಮಯ ಸಂಗತಿ ಎಂದರೆ ಬೈನರಿ ಸಂಖ್ಯೆಗಳನ್ನು ವೇದ ವಿದ್ವಾಂಸ ಪಿಂಗಳ ಅವರು ತಮ್ಮ ಛಂದಶಾಸ್ತ್ರ ಪುಸ್ತಕದಲ್ಲೇ ಮೊದಲ ಬಾರಿಗೆ ಬಣ್ಣಿಸಿದ್ದಾರೆ. ಇದನ್ನು ಸಂಸ್ಕøತದ ಪ್ರಥಮ ಛಂದಸ್ಸು ಪಠ್ಯ ಎಂದೇ ಪರಿಗಣಿಸಲಾಗಿದೆ. ಕಂಪ್ಯೂಟರ್ ಪೆÇ್ರೀಗ್ರಾಂ ಲಾಂಗ್ವೇಜ್ ಆಗಿ ಇದು ಈಗಲೂ ಚಾಲ್ತಿಯಲ್ಲಿರುವುದು ಎಲ್ಲರನ್ನು ಚಕಿತಗೊಳಿಸುವ ಸಂಗತಿ.

# ಕ್ರಮಾವಳಿಗಳ ಚಕ್ರವಳ ವಿಧಾನ
ಚಕ್ರವಳ ವಿಧಾನವು ಪೆಲ್ಸ್ ಸಮೀಕರಣ ಸೇರಿದಂತೆ ಅನಿರ್ದಿಷ್ಟ ವರ್ಗ ಸಮೀಕರಣಗಳನ್ನು ಬಿಡಲು ಬಳಸುವ ಚಕ್ರ ರೂಪದ ಕ್ರಮಾವಳಿ (ಸೈಕ್ಲಿಕ್ ಆಲ್ಗೊರಿದಂ) ಆಗಿದೆ. 7ನೇ ಶತಮಾನದ ಖ್ಯಾತ ಗಣಿತಶಾಸ್ತ್ರಜ್ಞ ಬ್ರಹ್ಮಗುಪ್ತ ಅವರಿಂದ ಪೂರ್ಣಾಂಕ ಸಮಸ್ಯೆ ಬಿಡಿಸುವ ವಿಧಾನವಾಗಿ ಬಳಸಲಾಗಿತ್ತು. ಮತ್ತೊಬ್ಬ ಹೆಸರಾಂತ ಗಣಿತಜ್ಞರಾಗಿದ್ದ ಜಯದೇವ ಅವರುನಂತರ ಇದನ್ನು ವ್ಯಾಪಕ ಶ್ರೇಣಿಯ ಸಮೀಕರಣ ಬಿಡಿಸಲು ಈ ವಿಧಾನವನ್ನು ಮತ್ತಷ್ಟು ಮೇಲ್ದಜೇಗೇರಿಸಿದರು. ತರವಾಯ ತಮ್ಮ ಬೀಜಗಣಿತ ಪುಸ್ತಕದಲ್ಲಿ ಗಣಿತ ವಿದ್ವಾಂಸ ಎರಡನೇ ಭಾಸ್ಕರ ಇದನ್ನು ಮತ್ತಷ್ಟು ಸವಿವರವಾಗಿ ವ್ಯಾಖ್ಯಾನಿಸಿದರು.

# ಗಜಕೋಲು ಮಾಪನಗಳು
ಗಣಿತ ಲೋಕಕ್ಕೆ ಗಜಕೋಲು ಮಾಪನಗಳು(ರೂಲರ್ ಮೆಸರ್‍ಮೆಂಟ್) ಅಥವಾ ರೇಖೀಯ ಅಳತೆಗಳನ್ನು ಪರಿಚಯಿಸಿದವರೂ ಕೂಡ ಭಾರತೀಯರೇ. ಹರಪ್ಪ ನಾಗರಿಕತೆಯ ಸ್ಥಳದ ಉತ್ಖನನದ ವೇಳೆ ದೊರೆತ ವಸ್ತುಗಳು ಇಂಥ ಮಾಪನಗಳಿಗೆ ಪುರಾವೆ ಒದಗಿಸುತ್ತವೆ. ಇವರನ್ನು ಆನೆದಂತ ಮತ್ತು ಚಿಪ್ಪಿನಿಂದ ತಯಾರಿಸಲಾಗಿತ್ತು. ಅವುಗಳ ಮೇಲೆ ಅತ್ಯಂತ ಕರಾರುವಕ್ಕಾದ ಸಣ್ಣ ಗೆರೆಗಳನ್ನು ಅಳತೆಯನ್ನಾಗಿ ಗುರುತಿಸಲಾಗಿತ್ತು. ದಕ್ಷಿಣ ಭಾರತದ ಪ್ರಾಚೀನ ವಾಸ್ತುಶಿಲ್ಪದಲ್ಲಿ ಸಾಂಪ್ರದಾಯಿಕವಾಗಿ ಬಳಸುತ್ತಿದ್ದ ಮಾಪನಗಳು ಮತ್ತು ಅಳತೆಗೋಲುಗಳನ್ನು ಇವು ಬಹುತೇಕ ಹೋಲುತ್ತವೆ. ಇದೇ ಸ್ಥಳದಲ್ಲಿ ಪತ್ತೆಯಾದ ಪ್ರಾಚೀನ ಇಟ್ಟಿಗೆಗಳ ವಿಸ್ತೀರ್ಣವು ಈ ಗಜಕೋಲುಗಳಲ್ಲಿನ ಅಳತೆಗಳಿಗೆ ಅತ್ಯಂತ ನಿಖರವಾಗಿ ಹೋಲುತ್ತವೆ ಎಂಬುದು ಅಚ್ಚರಿಯ ಸಂಗತಿ. ಈಗಿನ ವಾಸ್ತುಶಿಲ್ಪಿಗಳೇ ಬೆರಗಾಗುವಂಥ ಕರಾರುವಕ್ಕಾದ ಅಳತೆಗಳಿಗೆ ಇವು ಸಾಕ್ಷಿಯಾಗಿವೆ.

# ವೂಟ್ಜ್ ಉಕ್ಕು
ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ಅಭಿವೃದ್ದಿಗೊಳಿಸಿರುವ ಮಿಶ್ರಲೋಹ ಉಕ್ಕು-ವೂಟ್ಜ್ ಸ್ಟೀಲ್ ಮಾದರಿ ಉಕ್ಕನ್ನು ಶತಶತಮಾನಗಳ ಹಿಂದೆಯೇ ತಯಾರಿಸಲಾಗುತ್ತಿತ್ತು. ಇದನ್ನು ಉಕ್ಕು, ಹಿಂಡ್ವನಿ ಮತ್ತು ಸೆರಿಕ್ ಕಬ್ಬಿಣ ಎಂಬ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತಿತ್ತು. ಡಮಸ್ಕಸ್ ಖಡ್ಗಗಳನ್ನು ತಯಾರಿಸಲು ಈ ಉಕ್ಕನ್ನು ಬಳಸಲಾಗುತ್ತಿತ್ತು. ಜಾರುತ್ತಿರುವ ಅತ್ಯಂತ ನುಣುಪಾದ ರೇಷ್ಮೆ ಶಿರೋವಸ್ತ್ರವನ್ನು ಕತ್ತರಿಸುವಷ್ಟು ಹರಿತವಾಗಿತ್ತು. ತಮಿಳುನಾಡಿನ ಚೇರ ಚಕ್ರಾಧಿಪತ್ಯದಲ್ಲಿದ್ದ ತಮಿಳು ಕಮ್ಮಾರರು ಇಂಥ ಉತ್ಕøಷ್ಟ ಉಕ್ಕನ್ನು ಆಗಿನ ಕಾಲದ ಮಟ್ಟಿಗೆ ಅತ್ಯಂತ ಆಧುನಿಕ ಎನ್ನಬಹುದಾದ ವಿಧಾನದಲ್ಲಿ ತಯಾರಿಸುತ್ತಿದ್ದರು. ಕಲ್ಲಿದ್ದಲು ದಹನಕುಂಡಗಳ ಒಳಗೆ ಮೊಹರು ಮಾಡಿದ ಜೇಡಿಮಣ್ಣಿನ ಮೂಸೆಯಲ್ಲಿ(ಕೋವೆ ಅಥವಾ ಲೋಹ ಕರಗಿಸುವ ಪಾತ್ರೆ) ಇಂಗಾಲ ಸಮ್ಮುಖದಲ್ಲಿ ಕಪ್ಪು ಆಯಸ್ಕಾಂತೀಯ ಅದಿರನ್ನು ಕಾಯಿಸುವ ಮೂಲಕ ಅತ್ಯುತ್ತಮ ಗುಣಮಟ್ಟದ ಉಕ್ಕು ತಯಾರಿಸುತ್ತಿದ್ದರು. ಇದೇ ತಂತ್ರಜ್ಞಾನ ಈ ಯುಗದಲ್ಲಿ ಹೈಟೆಕ್ ರೂಪ ಪಡೆದಿದೆಯಷ್ಟೇ..

# ಆಯುರ್ವೇದ
ವೈದ್ಯಕೀಯ ಲೋಕಕ್ಕೆ ಭಾರತದ ಮತ್ತೊಂದು ಮಹತ್ವದ ಕೊಡುಗೆ ಎಂದರೆ ಆಯುರ್ವೇದ ವಿಜ್ಞಾನ. ಗ್ರೀಕ್‍ನ ಹಿಪೋಕ್ರೇಸ್ಟ್ ಜನಿಸುವುದಕ್ಕೆ ಎಷ್ಟೋ ವರ್ಷಗಳ ಮುನ್ನವೇ ಮಹಾ ಪಂಡಿತೋತ್ತಮರಾದ ಚರಕ ಅವರು ಚರಕಸಂಹಿತೆ ಎಂಬ ಪ್ರಾಚೀನ ಆಯುರ್ವೇದ ವೈದ್ಯ ಗ್ರಂಥ ರಚಿಸಿದ್ದರು. ಇವರನ್ನು ಭಾರತೀಯ ಔಷಧಿಯ ಪಿತಾಮಹಾ ಎನ್ನುತ್ತಾರೆ. ಜೀರ್ಣಕ್ರಿಯೆ, ಚಯಾಪಚಯ ಕ್ರಿಯೆ ಹಾಗೂ ರೋಗ ಪ್ರತಿರೋಧದ ಪರಿಕಲ್ಪನೆ ವಿಷಯಗಳನ್ನು ತಮ್ಮ ಗ್ರಂಥದಲ್ಲಿ ಪ್ರಸ್ತುತಪಡಿಸಿದ ಭಾರತದ ಪ್ರಥಮ ವೈದ್ಯ ಮಹಾಶಯರು. ಎರಡು ಸಹಸ್ರಮಾನಗಳ ನಂತರವೂ ಇದು ಇಂದಿಗೂ ರೋಗ ನಿವಾರಣೆ ಚಿಕಿತ್ಸೆಯ ಪ್ರಾಚೀನ ಆದರೆ ಅಷ್ಟೇ ಪ್ರಸ್ತುತದ ಅಮೂಲ್ಯ ಕೈಪಿಡಿಯಾಗಿದೆ. ಈ ಗ್ರಂಥವು ಅರೇಬಿಕ್ ಮತ್ತು ಲ್ಯಾಟಿನ್ ಸೇರಿದಂತೆ ಅನೇಕ ವಿದೇಶಿ ಭಾಷೆಗಳಿಗೂ ಅನುವಾದವಾಗಿರುವುದು ಚರಕಸಂಹಿತೆಯ ಲೋಕಪ್ರಿಯತೆಗೆ ಸಾಕ್ಷಿ.

Facebook Comments

Sri Raghav

Admin