ಅನಿವಾಸಿ ಭಾರತೀಯರ ಸ್ವಾತಂತ್ರ್ಯೋತ್ಸವ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

India--0104

ವಾಷಿಂಗ್ಟನ್/ಮೆಲ್ಬೊರ್ನ್/ಬೀಜಿಂಗ್ (ಪಿಟಿಐ), ಆ.15-ವಿಶ್ವದ ವಿವಿಧ ದೇಶಗಳಲ್ಲಿ ನೆಲೆಸಿರುವ ಸಹಸ್ರಾರು ಭಾರತೀಯರು ಇಂದು ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆಯೊಂದಿಗೆ 72ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.  ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್, ಚೀನಾ, ಸಿಂಗಪುರ್ ಹಾಗೂ ಅನೇಕ ದೇಶಗಳಲ್ಲಿರುವ ಭಾರತದ ರಾಜತಾಂತ್ರಿಕರು ಮತ್ತು ಭಾರತೀಯರು ಸಡಗರ-ಸಂಭ್ರಮದೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಚರಿಸಿದ್ದು ವಿಶೇಷವಾಗಿತ್ತು. ಆಯಾ ದೇಶಗಳ ಭಾರತದ ರಾಯಭಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ದೇಶಭಕ್ತಿ ಗೀತೆಗಳನ್ನು ಹಾಡಿ, ಸಿಹಿ ವಿತರಿಸಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ಇದೇ ಸಂದರ್ಭದಲ್ಲಿ ಓದಲಾಯಿತು.

Facebook Comments

Sri Raghav

Admin