ಹೊಸ ಜಿಯೋ ಫೋನ್-2ನ ಬೆಲೆ ಎಷ್ಟು ಗೊತ್ತೇ..? ಫ್ಯೂಚರ್’ಗಳೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Jio-Phone--2

ಬೆಂಗಳೂರು. ಆ. 15 : ಜಿಯೋ ಫೋನ್-2 ದ ಫ್ಲಾಶ್ ಸೇಲ್ ಆಗಸ್ಟ್ 16ರಂದು ಮಧ್ಯಾಹ್ನ 12 ಗಂಟೆಯಿಂದ ಶುರುವಾಗಲಿದೆ. ಆಗಸ್ಟ್ 15 ರಿಂದ ಜಿಯೋ ಗಿಗಾ ಫೈಬರ್ ಸೇವೆಯನ್ನು ಪಡೆಯಲು ರಿಜಿಸ್ಟ್ರೇಷನ್ ಆರಂಭವಾಗಿದೆ.   ಈಗಾಗಲೇ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರವನ್ನು ಪಡೆದಿರುವ ಫೋನ್‌ ಬೇಡಿಕೆಯೂ ಅಧಿಕವಾಗಲಿದೆ. 2016ರಲ್ಲಿ ಲಾಂಚ್ ಆದ ಜಿಯೋ ಫೋನ್ ಕೇವಲ ರೂ.1500ಕ್ಕೆ ಲಭ್ಯವಿತ್ತು. ಅಲ್ಲದೇ ಅದು ಮರು ಪಾವತಿಯ ಠೇವಣಿಯಾಗಿತ್ತು. ಆದರೆ ಈ ಬಾರಿ ಲಾಂಚ್ ಆಗಲಿರುವ ಜಿಯೋ ಫೋನ್ 2 ರೂ. 2,999ಕ್ಕೆ ಮಾರಾಟವಾಗಲಿದೆ ಎನ್ನಲಾಗಿದೆ. ಆದರೆ ಈ ಫೋನ್ ದೊಡ್ಡ ಮಟ್ಟದಲ್ಲಿ ಆಯ್ಕೆಗಳನ್ನು ಹೊಂದಿದ್ದು, ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಗಳನ್ನು ನೀಡಲಿದೆ.

Jio--01

ಹಳೆ ಫೀಚರ್ ಫೋನ್ ನಲ್ಲಿ ಟೈಪಿಂಗ್ ಸಮಸ್ಯೆ ಎದುರಾಗ್ತಾಯಿತ್ತು. ಹೊಸ ಫೋನ್ ನಲ್ಲಿ ಈ ಸಮಸ್ಯೆ ಇರುವುದಿಲ್ಲ. ಇದ್ರಲ್ಲಿ ಫೇಸ್ಬುಕ್, ವಾಟ್ಸಾಪ್, ಯುಟ್ಯೂಬ್ ಮತ್ತು ಗೂಗಲ್ ನಕ್ಷೆಗಳು ಲಭ್ಯವಾಗಲಿವೆ. ಜಿಯೋ ಫೋನ್ 2 ನಲ್ಲಿ 2.4 ಇಂಚಿನ ಸ್ಕ್ರೀನ್ ನೀಡಲಾಗಿದೆ. QWERTY ಕೀ ಪ್ಯಾಡ್ ಇದೆ. ಇದ್ರಲ್ಲಿ 512 ಎಂಬಿ ರ್ಯಾಮ್, 4ಜಿಬಿ ಇಂಟರ್ನಲ್ ಮೆಮೊರಿ ನೀಡಲಾಗಿದೆ.

ಜಿಯೋ ಫೋನ್ 2ನಲ್ಲಿ 2 ಮೆಗಾಪಿಕ್ಸಲ್ ಕ್ಯಾಮರಾ ನೀಡಲಾಗಿದೆ. ವಿಡಿಯೋ ಕಾಲಿಂಗ್ ಗಾಗಿ 0.3 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ನೀಡಲಾಗಿದೆ. ಈ ಫೋನ್ KAI OS ನಲ್ಲಿ ಕೆಲಸ ಮಾಡಲಿದೆ. ಜಿಯೋ ಫನ್ -2ನಲ್ಲಿ 2000 mAh ಬ್ಯಾಟರಿ ನೀಡಲಾಗಿದೆ.

Facebook Comments

Sri Raghav

Admin